ಸಿಎಂ ಡಿ.ಕೆ.ಶಿವಕುಮಾರ್ ಮೊದಲ ಅಧಿವೇಶನಕ್ಕೆ ಸಿದ್ದರಾಮಯ್ಯ ಗೈರು!!
ಡಿ.ಕೆ.ಶಿವಕುಮಾರ್ ಸಿಎಂ ಆದ ಮೇಲೆ ನಡೆಯುತ್ತಿರುವ ಮೊದಲ ವಿಧಾನಮಂಡಲ ಅಧಿವೇಶನಕ್ಕೆ ಆಡಳಿತ ಪಕ್ಷದ ಸದಸ್ಯರೇ ಗೈರು!
ರಾಜಕೀಯ
8/13/20261 min read


ಡಿ.ಕೆ.ಶಿವಕುಮಾರ್ ಸಿಎಂ ಆದ ಬಳಿಕ ನಡೆಯುತ್ತಿರುವ ಮೊದಲ ವಿಧಾನಮಂಡಲ ಅಧಿವೇಶನಕ್ಕೆ ಬಹುತೇಕ ಆಡಳಿತ ಪಕ್ಷದ ಸದಸ್ಯರೇ ಗೈರಾಗಿದ್ದಾರೆ. ಸಚಿವರು, ಶಾಸಕರು ಸೇರಿ ಹಲವು ಸದಸ್ಯರು ವಿಧಾನಸಭೆಗೆ ಬಂದೇ ಇಲ್ಲ.. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿವೇಶನಕ್ಕೆ ಹಾಜರಾಗಿಲ್ಲ. ಕಲಾಪದ ಆರಂಭದಲ್ಲಿ ಆಡಳಿತ ಪಕ್ಷದ ಸಚಿವರು ಸೇರಿ 60ರಿಂದ 70 ಜನ ಸದಸ್ಯರು ಮಾತ್ರ ಭಾಗಿ ಆಗಿದ್ದಾರೆ. ಸಿದ್ದರಾಮಯ್ಯ, ಪ್ರಿಯಾಕೃಷ್ಣ, ಎಂ ಕೃಷ್ಣಪ್ಪ, ಯಶವಂತರಾಯ ಗೌಡ ಪಾಟೀಲ್, ಹೆಚ್.ಸಿ.ಮಹಾದೇವಪ್ಪ ಮತ್ತಿತರ ಶಾಸಕರು ಸದನಕ್ಕೆ ಬಂದಿಲ್ಲ..
ಹಾಜರಾದ ಅಸಮಾಧಾನಿತ ಶಾಸಕರು:
ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡ ಅಸಮಾಧಾನಿತ ಶಾಸಕರು ಕಲಾಪಕ್ಕೆ ಮುನಿಸಿದ್ದರೂ ಹಾಜರಾಗಿದ್ದರು. ಹೆಚ್.ಕೆ.ಪಾಟೀಲ್, ಎಂ.ಸಿ. ಸುಧಾಕರ್, ಹಂಪನಗೌಡ ಬಾದರ್ಲಿ, ಎಸ್.ಎನ್.ನಾರಾಯಣ ಸ್ವಾಮಿ, ಆರ್.ವಿ. ದೇಶಪಾಂಡೆ, ಬಿ.ಆರ್.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಅನ್ನಪೂರ್ಣ ತುಕಾರಾಂ, ರೂಪಾ ಶಶಿಧರ್ ವಿಧಾನಸಭೆ ಕಲಾಪದಲ್ಲಿ ಭಾಗಿಯಾದರು.


