ಬೆಂಗಳೂರಲ್ಲಿ ಪತ್ನಿಯ ಮೇಲೆ ಆಸಿಡ್ ದಾಳಿ: ದಾಳಿಯ ಕಂಪ್ಲೀಟ್ ವಿಡಿಯೋ ಇಲ್ಲಿದೆ ನೊಡಿ!
LATEST NEWSಬೆಂಗಳೂರುಅಪರಾಧ
S3 Media House
9/17/20261 min read


ಪತಿಯೇ ಪತ್ನಿ ಮೇಲೆ ಆಸಿಡ್ ನಿಂದ ದಾಳಿ ಮಾಡಿ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜೆಪಿ ನಗರದ ಮೂರನೇ ಪೇಸ್ ನ ನಾರಾಯಣ ಕ್ಲಿನಿಕ್ ಬಳಿ ಇಂದು ಬೆಳಿಗ್ಗೆ ನಡೆದಿದೆ. ಮಧುಮಿತ (26) ದಾಳಿಗೊಳಗಾದ ಮಹಿಳೆಯಾಗಿದ್ದಾರೆ. ಮಧುಮಿತಿ ಮೂಲತಃ ಕೊಲ್ಕತ್ತಾ ನಿವಾಸಿಯಾಗಿದ್ದಾರೆ.
ಅಂದಹಾಗೆ ನಾರಾಯಣ ಕ್ಲಿನಿಕ್ ನಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಮಧುಮಿತ ಇಂದು ಬೆಳಿಗ್ಗೆ ತಿಂಡಿ ತಿನ್ನಲೆಂದು ಹೊರಗಡೆ ಬಂದಿದ್ದಾರೆ. ಈ ವೇಳೆ ಬೈಕ್ ನಲ್ಲಿ ಮಚ್ಚಿ ಮತ್ತು ಆ್ಯಸಿಡ್ ನೊಂದಿಗೆ ಬಂದಿದ್ದ ಪತಿ ವೆಂಕಟೇಶ್ ಏಕಾಏಕಿ ಪತ್ನಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಜೊತೆಗೆ ಪತ್ನಿಯ ಮೇಲೆ ಆ್ಯಸಿಡ್ ಸಹ ಎರಚಿದ್ದಾನೆ.
ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ವೆಂಕಟೇಶ್ ನನ್ನು ತಡೆಯಲು ಮುಂದಾಗಿದ್ದಾರೆ. ಆದರೂ ಸಹ ಸುಮ್ಮನಿರದ ಪಾಪಿ ಪತಿ ಮನಸೋ ಇಚ್ಛೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಜೊತೆಗೆ ಬಿಡಿಸಲು ಬಂದ ಸಾರ್ವಜನಿಕರ ಮೇಲೆ ಸಹ ಆಸಿಡ್ ಎರಚಲು ಮುಂದಾಗಿದ್ದಾನೆ.
ಈ ವೇಳೆ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ಮದ್ಯಪ್ರವೇಶಿಸಿ ಕಿಡಿಗೇಡಿ ವೆಂಕಟೇಶ್ ನನ್ನು ಬಂಧಿಸಿ ಸಂಬಂಧಪಟ್ಟ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಜೆಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ದಾಳಿಗೆ ನಿಖರ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದಷ್ಟೆ ತಿಳಿಯಬೇಕಿದೆ.



