ಕೆಂಪೇಗೌಡ ಏರ್ಪೋರ್ಟ್ ನಲ್ಲೇ ಕೊನೆಯುಸಿರೆಳೆದ ಮಹಿಳೆ! ಕಾರಣವೇನು ಗೊತ್ತಾ?
LATEST NEWSಬೆಂಗಳೂರು ಗ್ರಾಮಾಂತರಬೆಂಗಳೂರು
S3 Media House
9/17/20261 min read


ಹೌದು, ಮಹಿಳೆಯೊಬ್ಬರು ಬೆಂಗಳೂರಿನ ಕೆಂಪೆಗೌಡ ಏರ್ಪೋರ್ಟ್ ನಲ್ಲಿಯೇ ಕೊನೆಯುಸಿರೆಳೆದ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಕೇರಳದಿಂದ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ಗೆ ಬಂದಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಶಿವದಾಸ್ ಲತಾ(66) ಮೃತಪಟ್ಟಿರು ಮಹಿಳೆಯಾಗಿದ್ದಾರೆ.
ಅಂದಹಾಗೆ ಇಂದು ಮುಂಜಾನೆ ಕೇರಳದ ಕೋಜಿಕೋಡ್ ನಿಂದ ಆಕಾಶ್ ಏರ್ ಲೈನ್ಸ್ ನಲ್ಲಿ ಮಹಿಳೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಏರ್ಪೋರ್ಟ್ ನ ಎಸ್ಕಿಲೇಟರ್ ಮೇಲೆ ಹೃದಯಾಘಾತದಿಂದಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಮಹಿಳೆಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.



