ಲಗ್ಗೇಜ್ ಬ್ಯಾಗ್ ನಲ್ಲಿ ಕೋಟ್ಯಾಂತರ ಮೌಲ್ಯದ ಗಾಂಜಾ ಪತ್ತೆ!
LATEST NEWSಬೆಂಗಳೂರುಅಪರಾಧ
S3 Media House
9/2/20261 min read


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೆಂಪೇಗೌಡ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪುಕೆಟ್ ನಿಂದ ಕೇಂಪೇಗೌಡ ಏರ್ಪೋರ್ಟ್ ಗೆ ಬಂದಿದ್ದ ಪ್ರಯಾಣಿಕನ ಬ್ಯಾಗ್ ನಲ್ಲಿ 1.07 ಕೋಟಿ ಮೌಲ್ಯದ 3.05 ಕೆಜಿ ಹೈಡ್ರೋಪೋನಿಕ ಗಾಂಜಾ ಪತ್ತೆಯಾಗಿದೆ.
ಪ್ರಯಾಣಿಕನ ಬ್ಯಾಗ್ ನಲ್ಲಿ ಗಾಂಜಾ ಪತ್ತೆಯಾದ ಹಿನ್ನೆಲೆ ಪುಕೆಟ್ ನಿಂದ ಬಂದಂತಹ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತೀವ್ರ ತಪಾಸಣೆಗೆ ಒಳಪಸಿದ್ದರು. ಈ ಸಂಬಂಧ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.


