ಆನಂದ್ ಸ್ವೀಟ್ಸ್ ನಲ್ಲಿ ಖರೀದಿಸಿದ್ದ ಸಿಹಿ ಪದಾರ್ಥದಲ್ಲಿ ಕಲ್ಲಿನಂತಿರುವ ವಸ್ತು ಪತ್ತೆ!
ಸಾರ್ವಜನಿಕ ಸಮಸ್ಯೆಗಳುLATEST NEWSಬೆಂಗಳೂರು ಗ್ರಾಮಾಂತರ
S3 Media House
8/27/20261 min read


ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಆನಂದ್ ಸ್ವೀಟ್ಸ್ ನಲ್ಲಿ ಗ್ರಾಹಕನೋರ್ವ ಖರೀದಿಸಿದ್ದ ಸ್ವೀಟ್ಸ್ ನಲ್ಲಿ ಕಲ್ಲಿನಂತಹ ವಸ್ತು ಪತ್ತೆಯಾಗಿದೆ. ಆಗಸ್ಟ್ 20 ರಂದು ಕಾರ್ತಿಕ್ ಗವಾಜಿ ಎಂಬಾತನು 2050 ಮೌಲ್ಯದ ಸಿಹಿತಿಂಡಿ ಖರೀದಿ ಮಾಡಿದ್ದಾನೆ.
ಸಿಹಿತಿಂಡಿ ಸೇವಿಸುವಾಗ ಬಾಯಿಗೆ ಕಲ್ಲಿನಂತಹ ವಸ್ತು ಸಿಲುಕಿಕೊಂಡಿದೆ. ಈ ವೇಳೆ ಮತ್ತಷ್ಟು ಸಿಹಿಯನ್ನು ಪರಿಶೀಲನೆ ಮಾಡಿದ್ದಾನೆ. ಈ ವೇಳೆ ಸಿಹಿಯಲ್ಲಿ ಬಿಳಿ ಬಣ್ಣದ ಕಲ್ಲಿನಂತಹ ವಸ್ತು ಪತ್ತೆಯಾಗಿದೆ. ಇಂತಹ ಸಿಹಿ ಸೇವನೆಯಿಂದ ಕಲ್ಲಿಗೆ ಹಾಗು ನಾಲಿಗೆಗೆ ಹಾನಿಯಾಗಿದೆ. ಕಾರಣ ಮಾಲೀಕರು ಹಣವನ್ನು ಮರುಪಾವತಿ ಮಾಡಬೇಕು. ಜೊತೆಗೆ ಚಿಕಿತ್ಸಾ ವೆಚ್ಚವನ್ನು ಸಹ ಭರಿಸಬೇಕು ಎಂದು ಕಾರ್ತಿಕ್ ಗವಾಜಿ ನೋಟಿಸ್ ಕಳುಹಿಸಿದ್ದಾನೆ.
48 ಗಂಟೆಯ ನಂತರ ಕಾನೂನು ಹೋರಾಟ!
ನೋಟಿಸ್ ಕಳುಹಿಸಿರುವ ಕಾರ್ತಿಕ್ 48 ಗಂಟೆಗಳ ಗಡುವು ನೀಡಿದ್ದಾನೆ. 48 ಗಂಟೆಗಳೊಳಗಾಗಿ ಸೂಕ್ತ ಉತ್ತರ ಸಿಗದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ಸಹ ನೀಡಿದ್ದಾನೆ. ಜೊತೆಗೆ ಪ್ರತಿಕ್ರಿಯೆ ಸಿಗದಿದ್ದರೆ ಗ್ರಾಹಕ ಆಯೋಗ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾನೆ.


