ಬಯಲು ಸೀಮೆಯಲ್ಲಿ ನಿರ್ಮಾಣವಾಯ್ತು ಆಯೋಧ್ಯೆ ರಾಮಮಂದಿರ: ಮಂದಿರದಲ್ಲಿದೆ 23 ಅಡಿ ಉಗ್ರ ನರಸಿಂಹನ ಗಣೇಶನ ಅವಾತರ

ಗೌರಿಬಿದನೂರು ಬೈಪಾಸ್ ಗಣೇಶೋತ್ಸವ 23ನೇ ವರ್ಷದ ವೈಭವದ ಆಚರಣೆಗೆ ಸಿದ್ಧತೆ

ವಿಶೇಷ ವರದಿLATEST NEWSರಾಜ್ಯ

S3 Media House

9/13/20261 min read

ಗೌರಿಬಿದನೂರು: ನಗರದ ಬೈಪಾಸ್ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿರುವ 23ನೇ ವರ್ಷದ ಗೌರಿ-ಗಣೇಶೋತ್ಸವವು ಅದ್ದೂರಿಯಾಗಿ ನಡೆಯಲಿದ್ದು, ಈ ಬಾರಿ ರಾಜ್ಯದ ಗಮನ ಸೆಳೆಯುವ ರೀತಿಯಲ್ಲಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯ ಹಂಪಸಂದ್ರ ದೇವು ತಿಳಿಸಿದ್ದಾರೆ.


ಕಳೆದ 22 ವರ್ಷಗಳಿಂದ ಬೈಪಾಸ್ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಅಯೋಧ್ಯೆಯ ಶ್ರೀರಾಮಮಂದಿರದ ಮಾದರಿಯಲ್ಲಿ ಭವ್ಯವಾದ ಸೆಟ್ ನಿರ್ಮಿಸಲಾಗಿದೆ. ದೇವಸ್ಥಾನದ ಒಳಭಾಗದಲ್ಲಿ ದೇಶದ ಪ್ರಮುಖ 12 ಜ್ಯೋತಿರ್ಲಿಂಗಗಳ (ದ್ವಾದಶ ಲಿಂಗಗಳ) ಮಾದರಿಗಳನ್ನು ಭಕ್ತರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.

ಇದರ ಜೊತೆಗೆ ಸುಮಾರು 23 ಅಡಿ ಎತ್ತರದ ಉಗ್ರ ನರಸಿಂಹನ ಅವತಾರದಲ್ಲಿರುವ ಅಸುರ ಸಂಹಾರ ಗಣೇಶನ ವಿಶೇಷ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಇದು ಉತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.

ಉತ್ಸವದ ಸಿದ್ಧತೆಗಳನ್ನು ಸುಮಾರು ಎರಡು-ಮೂರು ತಿಂಗಳ ಮುಂಚಿತವಾಗಿಯೇ ಆರಂಭಿಸಲಾಗಿತ್ತು. ಚೆನ್ನೈನಿಂದ ಆಗಮಿಸಿರುವ ನುರಿತ ಕಲಾ ತಜ್ಞರ ನೇತೃತ್ವದಲ್ಲಿ ಪ್ರತಿದಿನ ಸುಮಾರು 80ರಿಂದ 100 ಮಂದಿ ಕಲಾವಿದರು ಹಾಗೂ ಕಾರ್ಮಿಕರು ಹಗಲು-ರಾತ್ರಿ ಶ್ರಮಿಸಿ ಭವ್ಯವಾದ ಸೆಟ್ ಹಾಗೂ ಅಲಂಕಾರ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಗಣೇಶ ಚತುರ್ಥಿಯ ಅಂಗವಾಗಿ ಸೆಪ್ಟೆಂಬರ್ 14ರಂದು ಸಂಜೆ 5 ಗಂಟೆಯಿಂದ ಭಕ್ತಾದಿಗಳಿಗೆ ದೇಗುಲದ ಮಾದರಿ ಸೆಟ್ ಪ್ರವೇಶ ಹಾಗೂ ಗಣೇಶನ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುವುದು. ಸುಮಾರು 21 ದಿನಗಳ ಕಾಲ ನಿರಂತರವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

ಕರ್ನಾಟಕ ರಾಜ್ಯದಲ್ಲೇ ಬೈಪಾಸ್ ಗಣೇಶೋತ್ಸವವು ವೈಭವದ ಆಚರಣೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಈ ಬಾರಿ ಪ್ರಥಮ ಸ್ಥಾನ ಗಳಿಸುವ ದಿಸೆಯಲ್ಲಿ ಉತ್ಸವವನ್ನು ಇನ್ನಷ್ಟು ವಿಶೇಷವಾಗಿ ಆಯೋಜಿಸಲಾಗಿದೆ. ಇದಕ್ಕೆ ಭಗವಂತನ ಕೃಪೆ ಹಾಗೂ ಭಕ್ತರ ಸಹಕಾರ ದೊರೆಯಲಿದೆ ಎಂಬ ವಿಶ್ವಾಸವನ್ನು ಸಮಿತಿ ಸದಸ್ಯರು ವ್ಯಕ್ತಪಡಿಸಿದ್ದಾರೆ.

ರಾಜ್ಯ, ಜಿಲ್ಲೆ, ತಾಲೂಕು ಹಾಗೂ ನಗರದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಭವ್ಯ ಗಣೇಶೋತ್ಸವದಲ್ಲಿ ಪಾಲ್ಗೊಂಡು ದೈವಿಕ ದರ್ಶನ ಪಡೆಯುವಂತೆ ಬೈಪಾಸ್ ಗಣೇಶೋತ್ಸವ ಸಮಿತಿ ಮನವಿ ಮಾಡಿದೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.