ಮುಂದೂಡಿದ ಬ್ಯಾಂಕ್ ಮುಷ್ಕರ! ಮತ್ತೆ ಯಾವಾಗ ಗೊತ್ತಾ ಬ್ಯಾಂಕ್ ಮುಷ್ಕರ?
LATEST NEWSರಾಜ್ಯದೇಶ
S3 Media House
9/28/20261 min read


ಹೌದು, ದೇಶಾದ್ಯಂತ ಇಂದು ಕರೆ ನೀಡಿದ್ದ ಬ್ಯಾಂಕ್ ಮುಷ್ಕರ ಮುಂದೂಡಿಕೆ ಮಾಡಲಾಗಿದೆ. ನೆನ್ನೆ ರಾತ್ರಿ ಬ್ಯಾಂಕ್ ಗಳ ಅಸೋಸಿಯೇಷನ್ ಜೊತೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಸಭೆಯಲ್ಲಿ ಡಿಸೀಷನ್ ತೆಗೆದುಕೊಳ್ಳಲಾಗಿದೆ. ಇಂದಿನಿಂದ ಸೆಪ್ಟೆಂಬರ್ 30 ರವರೆಗೆ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿತ್ತು.
ಬ್ಯಾಂಕ್ ಸಿಬ್ಬಂದಿ ಬೇಡಿಕೆ ಈಡೇರಿಕೆ ಕುರಿತು ನೆನ್ನೆ ನಡೆದ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು. ಶನಿವಾರ ರಜಾ ದಿನವಾಗಿ ಘೋಷಿಸಲು ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ. ಐಬಿಎ, ಯುಎಫ್‌ಬಿಯು ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚನೆಗೆ ಒಪ್ಪಿಗೆ ಸೂಚಿಸಲಾಗಿದೆ.
ಆದರೆ ಬ್ಯಾಂಕ್ ಸಿಬ್ಬಂದಿಯ ಬೇಡಿಕೆ ಈಡೆರಲಿಲ್ಲವಾದರೆ ಮತ್ತೆ ಸಿಬ್ಬಂದಿ ಮುಷ್ಕರ ನಡೆಸುವ ಬಗ್ಗೆ ಸಹ ಇದಾಗಲೇ ಸುಳಿವು ನೀಡಲಾಗಿದೆ ಎನ್ನಲಾಗಿದೆ. ಆದರೆ ಯಾವಾಗ ಎಂಬ ದಿನಾಂಕ ಇನ್ನೆನು ಕೆಲವೇ ದಿನಗಳಲ್ಲಿ ತಿಳಿಸಲಾಗುವುದು ಎಂಬ ಮಾಹಿತಿ ದೊರೆತಿದೆ.


