ಬೈಕ್ ಸೌಂಡ್ ವಿಚಾರಕ್ಕೆ ಭೀಕರ ಕೊಲೆ: ಚಿತ್ರದುರ್ಗದಲ್ಲಿ ವ್ಯಕ್ತಿಯ ಹತ್ಯೆ

ಹಾರಿಯಿಂದ ಎದೆಗೆ ಇರಿದು ಆನಂದ್ (30) ಕೊಲೆ; ಕುಟುಂಬದ ಎದುರೇ ನಡೆದ ಕೃತ್ಯ

LATEST NEWSರಾಜ್ಯಅಪರಾಧ

S3 Media House

10/30/20261 min read

ಚಿತ್ರದುರ್ಗ: ಬೈಕ್ ಸೌಂಡ್ ಹೆಚ್ಚಿಸಿದ್ದಾನೆ ಎಂಬ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಹಾರಿಯಿಂದ ಎದೆಗೆ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಬಹದ್ದೂರಘಟ್ಟ ಗ್ರಾಮದಲ್ಲಿ ನಡೆದಿದೆ.

ಬಹದ್ದೂರಘಟ್ಟ ಗ್ರಾಮದ ಆನಂದ್ (30) ಕೊಲೆಯಾದ ವ್ಯಕ್ತಿ. ವಾಸು, ಅಂಜಿನಪ್ಪ, ವಿಜಯ್, ಲಕ್ಷ್ಮಣ್ ಹಾಗೂ ವಿಕಾಸ್ ಎಂಬುವವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ವಾಸು ಮತ್ತು ಆನಂದ್ ಕುಟುಂಬಗಳ ನಡುವೆ ಈ ಹಿಂದಿನಿಂದಲೂ ದ್ವೇಷವಿತ್ತು ಎನ್ನಲಾಗಿದೆ. ಹಣಕಾಸಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮನಸ್ತಾಪ ಉಂಟಾಗಿದ್ದು, ಆನಂದ್ ಕುಟುಂಬವು ವಾಸು ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡಿತ್ತು ಎನ್ನಲಾಗಿದೆ. ಈ ಹಣದ ವಿಚಾರವಾಗಿ ಸುಮಾರು ಒಂದು ವರ್ಷದ ಹಿಂದೆಯೂ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು.

ಇದೀಗ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಬೈಕ್ ಸೌಂಡ್ ಹೆಚ್ಚಿಸಿದ್ದಾನೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಮತ್ತೆ ಗಲಾಟೆ ಆರಂಭವಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಆನಂದ್ ಮೇಲೆ ಹಾರಿ ದಾಳಿ ನಡೆಸಿ ಎದೆಗೆ ಇರಿದು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ದುರಂತವೆಂದರೆ, ಆನಂದ್ ಕುಟುಂಬದ ಸದಸ್ಯರ ಎದುರೇ ಈ ಭೀಕರ ಹತ್ಯೆ ನಡೆದಿದೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಭರಮಸಾಗರ ಪೊಲೀಸ್ ಠಾಣೆಯ ಪಿಐ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.