ವೈಭೋಗದ ಜೀವನಕ್ಕಾಗಿ ಕಳ್ಳನಾದ ಬಿ.ಟೆಕ್ ಪದವೀದರ!

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಐಷಾರಾಮಿ ಜೀವನಕ್ಕೆ ಜೋತು ಬಿದ್ದಿದ್ದು, ವೈಭೋಗದ ಜೀವನ ನಡೆಸಲು ಅಡ್ಡದಾರಿ ತುಳಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಅಪರಾಧ

ಶ್ರೀಧರ್​ ಎಂ ಬೂದಿಗೆರೆ

6/1/20261 min read

ಹೌದು, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಐಷಾರಾಮಿ ಜೀವನಕ್ಕೆ ಜೋತು ಬಿದ್ದಿದ್ದು, ವೈಭೋಗದ ಜೀವನ ನಡೆಸಲು ಅಡ್ಡದಾರಿ ತುಳಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತಹದ್ದೇ ಒಂದು ಪ್ರಕರಣ ಇಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬಿ.ಟೆಕ್​ ವಿದ್ಯಾರ್ಹತೆ ಹೊಂದಿದ್ದು ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದವ ಇಂದು ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದದ್ದು ಶ್ರೀ ಕೃಷ್ಣನ ಜನ್ಮ ಸ್ಥಾನದಲ್ಲಿ ಮುದ್ದೆ ಮುರಿಯುವಂತಾಗಿದೆ.

ಬೆಂಗಳೂರಿನ ರಿಚರ್ಡ್ ಎಂಬಾತ ಈ ರೀತಿ ವೈಭೋಗದ ಜೀವನಕ್ಕಿಳಿದು ಜೈಲುಪಾಲಾಗಿರುವ ವ್ಯಕ್ತಿಯಾಗಿದ್ದಾನೆ. ಈತನ ಚಿನ್ನದ ಅಂಗಡಿಗಳನ್ನು ಟಾರ್ಗೆಟ್​ ಮಾಡುತ್ತಿದ್ದನಂತೆ. ಬ್ರಾಂಡೆಡ್​ ಬಟ್ಟೆ , ಶೂ ಹಾಗೂ ವಾಚ್​ ಧರಿಸುತ್ತಿದ್ದ ಇವನು ಗ್ರಾಹಕರ ಸೋಗಿನಲ್ಲಿ ಅಂಗಡಿಗಳಿಗೆ ಎಂಟ್ರಿ ಕೊಡುತ್ತಿದ್ದನಂತೆ. ಈ ವೇಳೆ ಮಾಲೀಕನ ಗಮನ ಬೆರೆಡೆ ಸೆಳೆದು ಕ್ಷಣಾರ್ಧದಲ್ಲಿ ಚಿನ್ನಭಾರಣ ಎಗರಿಸುತ್ತಿದ್ದನಂತೆ. ಇಂತಹ ಶೋಕಿಲಾಲ ಧರಿಸುತ್ತಿದ್ದ ವಾಚ್​ನ ಬೆಲೆಯೇ 2 ಲಕ್ಷವಂತೆ. ಇಂತಹ ಬ್ರ್ಯಾಂಡೆಡ್​ ಕಳ್ಳನ ಬೆನ್ನತ್ತಿದ್ದ ಮಲ್ಲೇಶ್ವರಂ ಪೊಲೀಸರು ಅಸಾಮಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.