ತನಿಖೆ ಮೇಲೆ ತೆರಳಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಅಪಘಾತದಲ್ಲಿ ಸಾವು!
ಅಪಘಾತLATEST NEWSಬೆಂಗಳೂರು
S3 Media House
8/28/20261 min read


ಪ್ರಕರಣವೊಂದರ ತನಿಖೆಗೆಂದು ಬೆಂಗಳೂರಿನಿಂದ ಮದ್ಯಪ್ರದೇಶಕ್ಕೆ ತೆರಳಿದ್ದ ಪೊಲೀಸ್ ಇನ್ಸಪೆಕ್ಟರ್ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ.ಕೆ.ಬಿ ಮೃತ ದುರ್ದೈವಿಯಾಗಿದ್ದಾರೆ.
ಮದ್ಯಪ್ರದೇಶದ ಭೂಪಾಲ್ ನಿಂದ ಇಂದೋರ್ ಗೆ ತೆರಳುವಾಗ ಬಸ್ ಅಪಘಾತವಾಗಿದ್ದು ಪ್ರಪಾತಕ್ಕೆ ಉರುಳಿದೆ. ಬಸ್ ನಲ್ಲಿದ್ದ ಇನ್ಸಪೆಕ್ಟರ್ ರವಿ.ಬಿ.ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಿಎಸ್ಐ ಸೇರಿದಂತೆ ಉಳಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಸೈಬರ್ ಕ್ರೈಂ ಪ್ರಕರಣ ಸಂಬಂಧ ಮಧ್ಯಪ್ರದೇಶಕ್ಕೆ ಪೊಲೀಸ್ ತನಿಖಾ ತಂಡ ತೆರಳಿತ್ತು ಎಂದು ತಿಳಿದು ಬಂದಿದೆ.
2007 ನೇ ಬ್ಯಾಚ್ ನಲ್ಲಿ ಪೊಲೀಸ್ ಇಲಾಖೆಗೆ ಪಾದಾರ್ಪಣೆ ಮಾಡಿದ್ದ ರವಿ ಬಿ.ಕೆ. ಈ ಹಿಂದೆ ಬೆಂಗಳೂರಿನ ಈ ಹಿಂದೆ ಬೆಂಗಳೂರಿನ ಅಶೋಕನಗರ, ಇಂದಿರಾನಗರ, ಕೋರಮಂಗಲ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿದ್ದರು.


