ಕ್ಯಾಟ್ ಫಿಶ್ ಹೊಂಡಗಳ ತೆರವು ಮಾಡಿಸಿದ ಸಿಇಓ! ಇಷ್ಟು ದಿನ ಕಣ್ಮುಚ್ಚಿ ಕುಳಿತಿದ್ದ ಅಧಿಕಾರಿಗಳ ವಿರುದ್ಧ ಕ್ರಮವೇಕಿಲ್ಲ?

ಸಾರ್ವಜನಿಕ ಸಮಸ್ಯೆಗಳುLATEST NEWSಬೆಂಗಳೂರು ಗ್ರಾಮಾಂತರಅಪರಾಧ

S3 Media House

9/25/20261 min read

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿಯಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ಕ್ಯಾಟ್ ಫಿಶ್ ಹೊಂಡಗಳನ್ನು ಬೆಂಗಳೂರು ಗ್ರಾಮಾಂತರ ಸಿಇಓ ಡಾ.ವಾಸಂತಿ ಅಮರ್ ದಿಢೀರ್ ದಾಳಿ ಮಾಡಿ ಹೊಂಡಗಳನ್ನು ನಾಶ ಪಡಿಸಿರುತ್ತಾರೆ.

ಕಂದಾಯ ಇಲಾಖೆ ಅಧಿಕಾರಿಗಳು, ತಾಲ್ಲೂಕು ಪಂಚಾಯ್ತಿ ಇಓ, ಮಿನುಗಾರಿಕೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯಚರಣೆ ನಡೆಸಿದ್ದು, ದಂಧೆಕೋರರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಕ್ಯಾಟ್ ಫಿಶ್ ನ ಅನಾನುಕೂಲಗಳ ಕುರಿತು ಸಹ ಜನರಿಗೆ ತಿಳಿಸುವಂತಹ ಕಾರ್ಯ ಈ ಇಲಾಖೆಗಳು ಮಾಡುತ್ತಿರುವುದರ ಕುರಿತು ಮೆಚ್ಚುಗೆ ಸಹ ವ್ಯಕ್ತವಾಗಿದೆ.

ಆದರೆ, ಕ್ಯಾಟ್ ಫಿಶ್ ಸಾಕಾಣಿಕೆ ಮತ್ತು ಮಾರಾಟ ಮಾಡುತ್ತಿದ್ದವರ ವಿರುದ್ಧ ಮಾತ್ರ ಕ್ರಮ ಕೈಗೊಂಡಿರುವ ಹಿರಿಯ ಅಧಿಕಾರಿಗಳಿಗೆ ಸಾರ್ವಜನಿಕ ವಲಯದಲ್ಲಿ ಕೆಲವೊಂದು ಪ್ರಶ್ನೆಗಳು ಕೇಳಿ ಬರುತ್ತಿವೆ. ಕೇವಲ ದಂಧೆಕೋರರ ವಿರುದ್ಧ ಕ್ರಮ ಕೈಗೊಂಡ ಅಧಿಕಾರಿಗಳು, ಇಷ್ಟು ದಿನದಿಂದಲೂ ದಂಧೆ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ಸ್ಥಳೀಯ ಅಧಿಕಾರಿಗಳ ವಿರುದ್ಧ ಕ್ರಮವೇಕೆ ಕೈಗೊಂಡಿಲ್ಲ ಎಂಬ ಪ್ರಶ್ನೆ ಮೂಡಿದೆ.

ಗ್ರಾಮ ಸಹಾಯಕರು, ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಇಲಾಖೆಯವರು ಇವರೆಲ್ಲರಿಗೂ ತಿಳಿಯದೇ ಈ ಕ್ಯಾಟ್ ಫಿಶ್ ದಂಧೆ ನಡೆಯುತ್ತಿತ್ತಾ ಎಂಬುದು ಸಾರ್ವಜನಿಕರಲ್ಲಿ ಇದೀಗ ಮೂಡುತ್ತಿರುವ ದೊಡ್ಡ ಯಕ್ಷ ಪ್ರಶ್ನೆಯಾಗಿದೆ.

ಇಂತಹ ಅಕ್ರಮ ಕ್ಯಾಟ್ ಫಿಶ್ ದಂಧೆ ಗೆ ಕಡಿವಾಣ ಹಾಕಬೇಕಾದರೆ ಕೇವಲ ದಂಧೆಕೋರರ ವಿರುದ್ಧ ಕ್ರಮ ಕೈಗೊಂಡರೆ ಸಾಲದು ಜೊತೆಗೆ ದಂಧೆಗೆ ಯಾವ ಅಧಿಕಾರಿ ಕೈ ಜೋಡಿಸಿದ್ದಾನೆ ಅಂತಹವರ ವಿರುದ್ಧ ಸಹ ಕ್ರಮ ಕೈಗೊಂಡಾಗ ಮಾತ್ರ ದಂಧೆಯನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಾಧ್ಯವಾಗಿದೆ ಎಂಬುದು ಪಬ್ಲಿಕ್ ಮಾತಾಗಿದೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.