ಬಾಲಕಿಯ ಪೋಷಕರ ಪತ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮನವಿ

14 ವರ್ಷದ ಚುಂಕಿ ಎಂಬ ಬಾಲಕಿಯ ಪೋಷಕರು ಅಥವಾ ಸಂಬಂಧಿಕರ ಪತ್ತೆಗೆ ಮನವಿ

ಸಾರ್ವಜನಿಕ ಸಮಸ್ಯೆಗಳುಉಪಯುಕ್ತ

S3 Kannada News

7/10/20261 min read

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ಸ್ಪರ್ಶ ಮಕ್ಕಳ ಧಾಮದಲ್ಲಿ ಆಶ್ರಯ ಪಡೆಯುತ್ತಿರುವ 14 ವರ್ಷದ ಚುಂಕಿ ಎಂಬ ಬಾಲಕಿಯ ಪೋಷಕರು ಅಥವಾ ಸಂಬಂಧಿಕರ ಪತ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಾರ್ವಜನಿಕರ ಸಹಕಾರ ಕೋರಿದೆ.

ಚುಂಕಿ ಎಂಬ ಬಾಲಕಿಯನ್ನು 2022ರ ಜುಲೈ 3ರಂದು ಸ್ಪರ್ಶ ಮಕ್ಕಳ ಧಾಮಕ್ಕೆ ದಾಖಲಿಸಲಾಗಿದ್ದು, ಇದುವರೆಗೆ ಆಕೆಯ ಪೋಷಕರು ಅಥವಾ ಕಾನೂನುಬದ್ಧ ಪಾಲಕರು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಯ ಪೋಷಕರು, ಪಾಲಕರು ಅಥವಾ ಕಾನೂನುಬದ್ಧ ಹಕ್ಕುದಾರರು ಎಲ್ಲಿದ್ದರೂ, ಈ ಪ್ರಕಟಣೆಯ ದಿನಾಂಕದಿಂದ ನಾಲ್ಕು ತಿಂಗಳ ಅವಧಿಯೊಳಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.