ಏರಿಕೆಯಾಗುತ್ತಿರುವ ಕಮರ್ಷಿಯಲ್ ಸಿಲಿಂಡರ್ ದರ: ಗ್ರಾಹಕರ ಪರಿಸ್ಥಿತಿ ಹರೋಹರ!
ವಾಣಿಜ್ಯ ಬಳಕೆ ಸಿಲಿಂಡರ್ ಪರಿಷ್ಕೃತ ದರ ನಿನ್ನೆಯಿಂದ ಅಸ್ತಿತ್ವಕ್ಕೆ ಬಂದಿದೆ.
LATEST NEWS
Sridhar M Budigere
6/2/20261 min read


ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ದೇಶದಲ್ಲಿ ಮತ್ತೆ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತೆ ಮತ್ತೆ ಹೆಚ್ಚಳವಾಗಿದ್ದು, ಜನರ ಜೇಬಿಗೆ ಕತ್ತರಿ ಹಾಕೋ ಕೆಲಸ ಕೇಂದ್ರ ಸರ್ಕಾರ ಮಾಡಿದೆ. ಆಗಿದ್ರೆ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಎಷ್ಟು ಏರಿಕೆ ಆಗಿದೆ ಮತ್ತೆ ಹೋಟೆಲ್ ನಲ್ಲಿ ಆಹಾರ ದರ ಏರಿಕೆ ಆಗುತ್ತಾ ಎಂಬುದರ ಫುಲ್ ಡಿಟೈಲ್ಸ್ ಇಲ್ಲಿದೆ ಓದಿ.
ವಾಣಿಜ್ಯ ಬಳಕೆ ಸಿಲಿಂಡರ್ ಪರಿಷ್ಕೃತ ದರ ನಿನ್ನೆಯಿಂದ ಅಸ್ತಿತ್ವಕ್ಕೆ ಬಂದಿದೆ. ಈ ಪರಿಷ್ಕರಣೆಯೊಂದಿಗೆ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ರಿಟೇಲ್ ದರ 3,198ರೂ.ಗೆ ಏರಿಕೆಯಾಗಿದೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧದಿಂದ ಕಳೆದ ಮೂರು ತಿಂಗಳಲ್ಲಿ 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ ಮೇಲೆ ಒಟ್ಟು 1,338 ರುಪಾಯಿ ದರ ಏರಿಕೆ ಆಗಿದೆ. ಇತ್ತ ನಿನ್ನೆಯಿಂದ ಮತ್ತೆ 46 ರುಪಾಯಿ ಏರಿಕೆ ಮೂಲಕ ಕಳೆದ ತಿಂಗಳು 3,152 ರುಪಾಯಿ ಇದ್ದ ಕಮರ್ಷಿಯಲ್ ಸಿಲಿಂಡರ್ ನಿನ್ನೆಯಿಂದ ಬೆಂಗಳೂರಲ್ಲಿ 3,198 ರುಪಾಯಿಗೆ ಮಾರಾಟವಾಗಲಿದೆ.
ಜನವರಿಯಿಂದ ಜೂನ್ ವರೆಗೆ ಏರಿಕೆ ಆಗಿರುವ ಕಮರ್ಷಿಯಲ್ ಸಿಲಿಂಡರ್ ದರದ ವಿವರ.
1- ಜನವರಿ-1 ರಂದು 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ ಬೆಲೆ 1765.5 ಸಾವಿರ ರುಪಾಯಿಯಿತ್ತು.
2- ಫೆಬ್ರವರಿಯಲ್ಲಿ -1815 ಆಯಿತು. ಅಂದರೆ 50 ರುಪಾಯಿ ಏರಿಕೆ ಆಯಿತು.
3- ಮಾರ್ಚ್ ನಲ್ಲಿ ಎರಡು ಬಾರಿ ದರ ಏರಿಕೆ ಆಗಿದೆ - 1845 ಮೊದಲಿಗೆ 30 ರುಪಾಯಿ ಏರಿಕೆ ಆದರೆ
ಎರಡನೇ ಬಾರಿ 1959.5 ಸಾವಿರ ರುಪಾಯಿಯಾಗಿತ್ತು. ಅಂದ್ರೆ 114 ರುಪಾಯಿ ಏರಿಕೆಯಾಗಿತ್ತು.
4- ಏಪ್ರಿಲ್ ನಲ್ಲಿ 2,162 ರುಪಾಯಿಗೆ ಮಾರಾಟವಾದ್ರೆ, ಅಂದರೆ 203 ರುಪಾಯಿಯಷ್ಟು ದರ ಏರಿಕೆಯಾಗಿತ್ತು.
5- ಮೇ ತಿಂಗಳಿನಲ್ಲಿ 3,153 ರುಪಾಯಿ ಆಯಿತು. ಅಂದರೆ 991 ರುಪಾಯಿ ಏರಿಕೆ ಆಯಿತು.
6- ಜೂನ್- 1 ರಂದು ಅಂದರೆ ಇಂದು 3,199 ರುಪಾಯಿಗೆ ಮಾರಾಟವಾದ್ರೆ,19 ಕೆಜಿ ಕಮರ್ಷಿಯಲ್ ಸಿಲಿಂಡರ್ ಮೇಲೆ 46 ರುಪಾಯಿ ಏರಿಕೆ ಆಗಿದೆ.
ಇನ್ನೂ ಈ ಬಗ್ಗೆ ಮಾಹಿತಿ ನೀಡಿರೋ ಹೋಟೆಲ್ ಮಾಲೀಕರು ಕಮರ್ಷಿಯಲ್ ಸಿಲಿಂಡರ್ ಬೆಲೆ ಏರಿಕೆಯಿಂದ ಗ್ರಾಹಕರ ಮೇಲೆ ಹೊರೆ ಬೀಳುತ್ತದೆ. ಎಲೆಕ್ಟ್ರಿಕ್ ಸ್ಟೌವ್ ಗಳನ್ನು ಬಳಕೆ ಮಾಡುವ ಮೂಲಕ ಗ್ರಾಹಕರ ಮೇಲೆ ಹೊರೆ ಕಡಿಮೆ ಮಾಡಬೇಕು. ದರ ಏರಿಕೆ ಮಾಡುವುದು ಬಿಟ್ಟು ಹೋಟೆಲ್ ನವರಿಗೆ ಬೇರೆ ದಾರಿಯಿಲ್ಲ ಎರಡು ಇಡ್ಲಿ ತಿನ್ನುವ ಬದಲಿಗೆ ಒಂದು ಇಡ್ಲಿ ತಿನ್ನಬೇಕಾಗುತ್ತದೆ. ಕಮರ್ಷಿಯಲ್ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್ ನವರಿಗೆ ತೊಂದರೆ ಆಗುತ್ತದೆ. ಇದರಿಂದ ಪದೇ ಪದೇ ದರ ಏರಿಕೆ ಮಾಡೋದ್ರಿಂದ ಗ್ರಹಕರಿಗೂ ಕಷ್ಟ ಆಗುತ್ತೆ ಹೀಗಾಗಿ ದರ ಏರಿಕೆ ಮಾಡೋದಿಲ್ಲ ಗ್ಯಾಸ್ ಮೇಲಿರುವ ಸಿಎಸ್ಟಿ ದರ ಕಡಿಮೆ ಗೊಳಿಸಿ ಅಂತಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಒಟ್ನಲ್ಲಿ ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕ ಕದನ ವಿರಾಮ ಘೋಷಣೆ ಮಾಡಿದೆ. ಆದ್ರೆ ಯುದ್ಧದ ಎಫೆಕ್ಟ್ ನಿಂದ ಕಮರ್ಷಿಯಲ್ ಸಿಲಿಂಡರ್ ದರ ನಿರಂತರವಾಗಿ ಏರಿಕೆ ಆಗ್ತಾನೆಯಿದ್ದು,ಇದಕ್ಕೆ ಹೋಟೆಲ್ ಮಾಲೀಕರು ಸೇರಿ ಜನ ಕೆಂಡಕಾರುತ್ತಿರುವುದಂತು ಸುಳ್ಳಲ್ಲ.


