ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಇದೀಗ ಮದುವೆಯ ಟಾಕ್ ವಾರ್!
ರಾಜಕೀಯLATEST NEWSರಾಜ್ಯ
S3 Media House
9/28/20261 min read


ಹೌದು, ದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಇದೀಗ ಮದುವೆ ಟಾಕ್ ವಾರ್ ಆರಂಭವಾಗಿದೆ. ಎರಡು ಪಕ್ಷಗಳ ಪ್ರಮುಖ ನಾಯಕರುಗಳು ಮದುವೆ ಹೆಸರಿನಲ್ಲಿ ಕೆಸರೆರಚಾಟ ಶುರು ಮಾಡಿದ್ದಾರೆ.
ರಾಹುಲ್ ಗಾಂಧಿಗೆ ಮದುವೆ ಮಾಡ್ಸಿ!
ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಹುಲ್ ಗಾಂಧಿಗೆ ಹುಚ್ಚು ಹಿಡಿದಿದೆ. ಅವರಿಗೆ ಮೊದಲು ಮದುವೆ ಮಾಡಿಸಿ ಎಂದು ಹೇಳಿಕೆ ನೀಡಿದ್ದರು. ಹೇಳಿಕೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಅಸಮಧಾನ ವ್ಯಕ್ತವಾಗಿತ್ತು. ನಾರಾಯಣಸ್ವಾಮಿ ವಿರುದ್ಧ ಆಕ್ರೋಶವನ್ನು ಸಹ ವ್ಯಕ್ತಪಡಿಸಿದ್ದರು.
ಮೊದಲು ಮೋದಿಗೆ ಮದುವೆ ಮಾಡ್ಸಿ!
ಈ ಸಂಬಂಧ ಬಿಜೆಪಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ತಿರುಗಿ ಬಿದ್ದರುವ ಕಾಂಗ್ರೆಸ್ ಪಾಳಯ ಮೊದಲು ಮೋದಿಗೆ ಮದುವೆ ಮಾಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಕೆಟ್ ಹಿಡಿದು ಸ್ಥಾನ ಗಿಟ್ಟಿಸಿಕೊಂಡವರು ನೀವು, ರಾಹುಲ್ ಗಾಂಧಿ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆಯಿಲ್ಲ. ಮೊದಲು ನಿಮ್ಮ ಪಕ್ಷದಲ್ಲಿರುವವರಿಗೆ ಮದುವೆ ಮಾಡಿಸಿ ಎಂದು ಗುಡುಗಿದ್ದಾರೆ. ರಾಹುಲ್ ಗಾಂಧಿಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.


