ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡನಿಗೆ ಕೋಟ್ಯಾಂತರ ರೂಪಾಯಿ ವಂಚನೆ!

LATEST NEWSಅಪರಾಧರಾಜ್ಯ

S3 Media House

10/2/20261 min read

ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡನಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ವಂಚಿನೆ ಮಾಡಿದ್ದ ಇಬ್ಬರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್‌ ಮುಖಂಡ ರಕ್ಷಾ ರಾಮಯ್ಯನನ್ನು ವಂಚಿಸಿದ್ದು, 8.13 ಕೋಟಿ ರೂ ವಂಚನೆ ಮಾಡಲಾಗಿದೆ. ಗೋವಾದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಜಮೀನು ಕೊಡಿಸುವುದಾಗಿ ಹೇಳಿ ರಿಯಲ್ ಎಸ್ಟೇಟ್ ಕಂಪನಿ ರಕ್ಷಾ ರಾಮಯ್ಯಗೆ ವಂಚನೆ ಮಾಡಿದ್ದಾರೆ. ಈ ಸಂಬಂಧ ರಾಮಯ್ಯ ಕಂಪನಿಯ ಪ್ರತಿನಿಧಿ ದರ್ಶನ್ ಸದಾಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಸಂಬಂಧ ತಾರಕ್ ಮಂಗೇಶ್ ಅರೋಲ್ಕರ್ (47) ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.


ಅಂದಹಾಗೆ 2023ರಲ್ಲಿ ಗೋವಾದಲ್ಲಿಶಿಕ್ಷಣ ಸಂಸ್ಥೆ ಸ್ಥಾಪಿಸಲು ಜಾಗಕ್ಕಾಗಿ ಹುಡುಕಾಟ ನಡೆಸಿದ್ದ ರಕ್ಷಾ ರಾಮಯ್ಯ ಪರಿಚಯಸ್ಥರ ಮೂಲಕ ಪೆರ್ನೆಂ ತಾಲೂಕಿನ ದರ್ಗಲ್‌ ಗ್ರಾಮದಲ್ಲಿ ಜಾಗ ಫೈನಲ್ ಆಗಿತ್ತು. 28,825 ಚದರ ಮೀಟರ್‌ ಜಾಗ ಖರೀದಿಗೆ ನಿರ್ಧಾರ ಮಾಡಿದ್ದರು. ಜಮೀನು ಮಾಲೀಕ ತಾರಕ್‌ ಮಂಗೇಶ್‌ ಜತೆ ಮಾತುಕತೆ ಸಹ ಆಗಿತ್ತು . ಜಮೀನು ಮಾರಾಟ ಮಾಡಲು ಒಪ್ಪಿದ್ದ ಮಂಗೇಶ್‌ ಕಂಪನಿ ಕಡೆಯಿಂದ ಒಟ್ಟು 8.13 ಕೋಟಿ ರೂ. ಪಡೆದಿದ್ದರು. ಜಮೀನು ಅಗ್ರಿಮೆಂಟ್‌ ಮಾತ್ರ ಮಾಡಿಕೊಟ್ಟಿದ್ದ ಮಂಗೇಶ್‌, ರಿಜಿಸ್ಟರ್‌ ಮಾಡಿಕೊಟ್ಟಿರಲಿಲ್ಲ.

ಹಲವು ವರ್ಷಗಳ ಬಳಿಕ ಮಂಗೇಶ್‌, ಅದೇ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ಮೋಸ ಮಾಡಿದ್ದಾನೆ. ನಂತರ ಹಣ ವಾಪಸ್‌ ಕೊಡುವುದಾಗಿ ನಂಬಿಸಿ ಬ್ಯಾಂಕ್‌ ಚೆಕ್‌ ನೀಡಿದ್ದರು, ಆದರೆ ಚೆಕ್‌ಗಳು ಬ್ಯಾಂಕ್‌ನಲ್ಲಿಡೆಪಾಸಿಟ್‌ ಆಗದಂತೆ ಆರೋಪಿ ನೋಡಿಕೊಂಡಿದ್ದ ನಂತೆ. ಮತ್ತೊಬ್ಬ ಆರೋಪಿ ಯೋಗೇಶ್‌ ಗಾಗಿ ಪೋಲೀಸರ ಹುಡುಕಾಟ ನಡೆಸಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.