ಪ್ರದೀಪ್ ಈಶ್ವರ್ ಮೇಲಿನ ಚಪ್ಪಲಿ ಎಸೆತಕ್ಕೆ ಮಾಜಿ ಶಾಸಕ ಖಂಡನೆ
'ಪ್ರತಿಭಟನೆ ಮಾಡಿ, ಚಪ್ಪಲಿ-ಕಲ್ಲು ಎಸೆಯುವುದು ಬೇಡ' – ಟಿ. ವೆಂಕಟರಮಣಯ್ಯ
LATEST NEWSರಾಜಕೀಯ
S3 Media House
6/29/20261 min read
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದ ಘಟನೆಗೆ ದೊಡ್ಡಬಳ್ಳಾಪುರದ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕಲ್ಲು ಹಾಗೂ ಇತರೆ ವಸ್ತುಗಳನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಪ್ರಕಾರ ತಪ್ಪು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಏನೇ ಭಿನ್ನಾಭಿಪ್ರಾಯಗಳಿದ್ದರೂ ಮಾತಿನ ಮೂಲಕ ವ್ಯಕ್ತಪಡಿಸಬೇಕು. ಶಾಸಕರ ವಿರುದ್ಧ ಪ್ರತಿಭಟನೆ ನಡೆಸಬೇಕಾದರೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಡೆಸಲಿ. ಆದರೆ ಚಪ್ಪಲಿ ಅಥವಾ ಕಲ್ಲು ಎಸೆದು ಈ ರೀತಿಯ ಕೃತ್ಯ ಎಸಗುವುದು ತಪ್ಪು ಎಂದು ಟಿ. ವೆಂಕಟರಮಣಯ್ಯ ಅಭಿಪ್ರಾಯಪಟ್ಟಿದ್ದಾರೆ.
ಶಾಸಕರು ಪ್ರಚೋದನೆ ನೀಡಿದ್ದರೆ, ಜನರು ಪ್ರತಿಭಟನೆ, ಧರಣಿ ಅಥವಾ ಉಪವಾಸ ಸತ್ಯಾಗ್ರಹದಂತಹ ಶಾಂತಿಯುತ ಹೋರಾಟ ನಡೆಸಬಹುದು. ಆದರೆ ಕಲ್ಲು ಅಥವಾ ಚಪ್ಪಲಿ ಎಸೆದು ಹಲ್ಲೆ ನಡೆಸುವುದು ಯಾವುದೇ ಕಾರಣಕ್ಕೂ ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.
ಯಾವುದೇ ಪಕ್ಷದ ಕಾರ್ಯಕ್ರಮವಾಗಿರಲಿ, ಇಂತಹ ಘಟನೆಗಳು ನಡೆಯಬಾರದು ಎಂದು ದೊಡ್ಡಬಳ್ಳಾಪುರದಲ್ಲಿ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಹೇಳಿದ್ದಾರೆ.




