ಶರತ್ ಬಚ್ಚೇಗೌಡ ಬೆಂಬಲಿಗನ ಕ್ರಷರ್ ವಿರುದ್ಧ ತಿರುಗಿಬಿದ್ದ ರೈತರು! ನಿಯಮ ಉಲ್ಲಂಘಿಸಿ ಕ್ರಷರ್ ಸ್ಥಾಪನೆಗೆ ಅನಿರ್ದಿಷ್ಟಾವಧಿ ಧರಣಿ!
ರಾಜ್ಯLATEST NEWS
S3 Media House
8/25/20261 min read


ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗೆ ಎನ್ನಲಾದ ನರೇಂದ್ರ ಎಂ.ಸಿ ಮಾಲೀಕತ್ವದ ಕಷರ್ ವಿರುದ್ಧ ರೈತರು ಆಕ್ರೋಶಗೊಂಡು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಘಟನೆ ನಡೆದಿದೆ.
ಕೋಲಾರ ತಾಲೂಕಿನ ವೇಮಗಲ್ ಹೋಬಳಿ ಸೀತಿ ಗ್ರಾಮದ ಸರ್ವೇ ನಂ.19ರ ಸರ್ಕಾರಿ ಗೋಮಾಳ ಜಮೀನಿನಲ್ಲಿ ನಿಯಮ ಉಲ್ಲಂಘಿಸಿ ಜಲ್ಲಿ ಕ್ರಷರ್ ಘಟಕ ಸ್ಥಾಪನೆಯಾಗಿದ್ದು, ಈ ಭಾಗದ ತಿಪ್ಪೇನಹಳ್ಳಿ, ಮಾರ್ಜೇನಹಳ್ಳಿ ಹಾಗೂ ಮಠಪುರ ಗ್ರಾಮಸ್ಥರು ಜಾನುವಾರುಗಳೊಂದಿಗೆ ಕ್ರಷರ್ ಮುಂಭಾಗದ ರಸ್ತೆಯ ಪಕ್ಕದಲ್ಲಿ ಅಡುಗೆ ಮಾಡಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ಜೊತೆಗೆ ಕೇವಲ 6 ಎಕರೆಗೆ ಮಾತ್ರ ಕ್ರಷರ್ ನಡೆಸಲು ಅನುಮತಿ ಪಡೆದಿದ್ದು, ಸುತ್ತಮುತ್ತಲಿನ ಗೋಮಾಳ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕ್ರಷರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ ಈ ಕ್ರಷರ್ನಿಂದ ಬರುವ ಧೂಳಿನಿಂದ ಇಲ್ಲಿನ ರೈತರು ಬದುಕು ಮೂರಾಬಟ್ಟೆಯಾಗಿದ್ದು, ರೈತರು ಬೆಳೆದ ಬೆಳೆಗಳ ಮೇಲೆ ಕ್ರಷರ್ನಿಂದ ಬರುವ ಧೂಳು ಬೀಳುತ್ತಿದ್ದು ಬೆಳೆಗಳು ಹಾಳಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿಗೆ ಯೋಗ್ಯವಾದ ಹಾಗೂ ಗೋವುಗಳ ಮೇವಿಗಾಗಿ ಮೀಸಲಿರಿಸಿರುವ ಜಾಗದಲ್ಲಿ ಕ್ರಷರ್ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ. ಸುಮಾರು 20 ಎಕರೆಯಲ್ಲಿ ಕ್ರಷರ್ ನಡೆಸುತ್ತಿದ್ದು, ಈ ಕ್ರಷರ್ಗೆ ನೀಡಿರುವ ಅನುಮತಿಯನ್ನು ಕೂಡಲೇ ರದ್ದು ಮಾಡಬೇಕಾಗಿ ರೈತರು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದರು. ಜೊತೆಗೆ ಅಕ್ರಮವಾಗಿ ಕ್ರಷರ್ಗೆ ಯಾವ ರೀತಿ ಅನುಮತಿ ನೀಡಿದ್ದಾರೆ ಎಂದು ಕೂಡಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.


