ಇವನು ಹೇಗೆ ಚಿನ್ನ ಸಾಗಾಟ ಮಾಡ್ತಿದ್ದ ಅಂತ ಹೇಳಿದ್ರೆ ಶಾಕ್ ಆಗ್ತಿರ?

ಇಂತಹ ಖತರ್ನಾಕ್ ಕದೀಮನನ್ನು ಕಂಡು ಹಿಡಿದು ಕಂಬಿ ಹಿಂದೆ ಕಳುಹಿಸಿದ ಕಸ್ಟಮ್ಸ್ ಅಧಿಕಾರಿಗಳು!

LATEST NEWSಬೆಂಗಳೂರು ಗ್ರಾಮಾಂತರಅಪರಾಧ

S3 Media House

8/26/20261 min read

ವಿದೇಶಗಳಿಂದ ಭಾರತಕ್ಕೆ ಬರುವಂತಹ ಕೆಲವು ಕದೀಮರು ಹಲವು ರೀತಿಯಲ್ಲಿ ಚಿನ್ನ ಸಾಗಾಟ ಮಾಡಲು ಯತ್ನ ಮಾಡಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಲುಕಿ ಹಾಕಿಕೊಳ್ಳುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಖತರ್ನಾಕ್ ಕದೀಮ ಚಿನ್ನವನ್ನು ಎಲ್ಲಿ ಇಟ್ಕೊಂಡು ಸಾಗ್ತಿಸ್ತಿದ್ದ ಅಂತ ನಿಮಗೆ ಹೇಳಿದ್ರೆ ನೀವು ಗ್ಯಾರೆಂಟಿ ಶಾಕ್ ಆಗ್ತಿರ!

ಹೌದು ದುಬೈನಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಿದ್ದ ಮೊಹಮ್ಮದ್ ಸಿರಾಜ್ ಈ ರೀತಿ ಕೃತ್ಯ ಎಸಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ದುಬೈನಿಂದ ಬಂದಿದ್ದ ಈತ 82 ಗ್ರಾಂ ಚಿನ್ನದ ಕ್ಯಾಪ್ಸುಲ್ ಗಳನ್ನು ತನ್ನ ಬಾಯಿಯಲ್ಲಿ ಅಡಿಗಿಸಿಟ್ಟುಕೊಂಡು ಬೆಂಗಳೂರಿಗೆ ಬಂದಿದ್ದನಂತೆ. ಆದರೆ ಇವನ ಗ್ರಹಚಾರ ಕೆಟ್ಟಿತ್ತು ಅಂತ ಕಾಣುತ್ತೆ ಕಸ್ಟಮ್ಸ್ ಅಧಿಕಾರಿಗಳು ಸ್ಕ್ರೀನಿಂಗ್ ಮಾಡುವ ವೇಳೆ ಈತನ ನಿಜ ಸ್ವರೂಪ ಬಟಾಬಯಲಾಗಿದೆ. ಬಾಯಿಯಲ್ಲಿ ಕ್ಯಾಪ್ಸುಲ್ಸ್ ಇರುವುದು ತಿಳಿದ ಕಸ್ಟಮ್ಸ್ ನವರು ಈತನನ್ನು ಜೈಲಿಗಟ್ಟಿದ್ದಾರೆ. ಈ ಸಂಬಂಧ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.