ಆನ್ ಲೈನ್ ನಲ್ಲಿ ಮಾರಾಟವಾಗ್ತಿದ್ದವಂತೆ ಈ ಧತ್ತೂರ ಹಣ್ಣುಗಳು, ಬೀಜಗಳು! ಏನೀ ಧತ್ತೂರು ಹಣ್ಣುಗಳು ಅಂತಿರಾ ಈ ಸ್ಟೋರಿ ಓದಿ.
ಆರೋಗ್ಯLATEST NEWSಅಪರಾಧ
S3 Media House
8/25/20261 min read


ಹೌದು, ಅಮೇಜೌನ್, ಸ್ವಿಗ್ಗಿ ಹಾಗೂ ಬಿಗ್ ಬಾಸ್ಕೆಟ್ ಸೇರಿದಂತೆ ಹಲವು ಆನ್ ಲೈನ್ ಮಾರಾಟ ಸಂಸ್ಥೆಗಳು ಧತ್ತೂರ ಹಣ್ಣುಗಳು ಮತ್ತು ಬೀಜಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಇದೀಗ ಆರೋಗ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಇದಾಗಲೇ ಈ ಎಲ್ಲಾ ಸಂಸ್ಥೆಗಳಿಗೆ ನೋಟಿಸ್ ನೀಡಿದ್ದು, ಧತ್ತೂರ ಬೀಜಗಳು ಮತ್ತು ಹಣ್ಣುಗಳು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದೆ.
ಧತ್ತೂರ ಹಣ್ಣುಗಳು ವಿಷಕಾರಿ ಎಂದು ಇದಾಗಲೇ ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದರೂ ಸಹ ಆನ್ಲೈನ್ ವ್ಯಾಪಾರಿಗಳು ಜಾಹಿರಾತುಗಳನ್ನು ನೀಡುತ್ತಿದ್ದು, ಆಹಾರ ಸುರಕ್ಷತಾ ಇಲಾಖೆ ಗರಂ ಆಗಿದೆ. ಇನ್ನು ಈ ಎಲ್ಲಾ ಆನ್ಲೈನ್ ವ್ಯಾಪಾರಸ್ಥರು ಪರವಾನಿಗೆ ಸಂಖ್ಯೆ ಬಳಸಿ ಈ ಧತ್ತೂರ ಹಣ್ಣನ್ನು ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ಆಹಾರ ಸುರಕ್ಷತಾ ಇಲಾಖೆ ನೀಡಿರುವ ನೋಟಿಸ್ ಗೆ ಅಮೇಜೋನ್ ಯಾವುದೇ ಉತ್ತರ ನೀಡಿಲ್ಲ. ಸ್ವಿಗ್ಗಿ ಇನ್ಸ್ಟಾಮಾರ್ಟ್ ದಾಖಲೆ ನೀಡಲು ಸಮಯಾವಕಾಶ ಕೋರಿದೆ. ಜೊತೆಗೆ ಬಿಗ್ ಬಾಸ್ಕೆಟ್ ಧತ್ತೂರ ಮಾರಾಟ ತಡೆ ಹಿಡಿದಿರುವುದಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಧತ್ತೂರ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಲೇಬಲ್ ಅಳವಡಿಸುವುದಾಗಿ ಹೇಳಿಕೆ ನೀಡಿದೆ.
ಜೊತೆಗೆ ಮುಂದಿನ ದಿನಗಳಲ್ಲಿ ಧತ್ತೂರ ಅನುಮಾನಸ್ಪದ ಮಾರಾಟ ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕಾಗಿ ಕೋರಿದ್ದಾರೆ.


