ವಿಜಯಲಕ್ಷ್ಮಿಗೆ ಮತ್ತೆ ಟ್ರೋಲ್ ಕಾಟ! ಸೈಬರ್ ಪೊಲೀಸರ ಮೊರೆ!
ವಿಜಯಲಕ್ಷ್ಮಿಗೆ ಮತ್ತೆ ಸೋಷಿಯಲ್ ಮೀಡಿಯಾ ಕಿರುಕುಳ!
ಸಿನಿಮಾLATEST NEWSಅಪರಾಧ
S3 Media House
6/10/20261 min read


ನಟಿ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಕಿರುಕುಳ ಎದುರಾಗಿದೆ. ನಕಲಿ ಖಾತೆಗಳನ್ನು ಸೃಷ್ಟಿಸಿ ಅಶ್ಲೀಲ ಪದಗಳಿಂದ ನಿಂದನೆ ಮಾಡಲಾಗುತ್ತಿದ್ದು, ವೈಯಕ್ತಿಕ ಬದುಕನ್ನು ಗುರಿಯಾಗಿಸಿ ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿರುವ ಆರೋಪ ಕೇಳಿಬಂದಿದೆ.
"ಜಲಗಾರ ಯುನಿವರ್ಸಿಟಿ" ಎಂಬ ಹೆಸರಿನ ಖಾತೆಯಿಂದ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ವಿಜಯಲಕ್ಷ್ಮಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಇತ್ತೀಚೆಗೆ ಸಿನಿಮಾ ವೀಕ್ಷಣೆಗೆ ತೆರಳಿದ್ದ ವೇಳೆ ತೆಗೆದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಲಾಗಿದೆ ಎನ್ನಲಾಗಿದೆ.
ಇದಲ್ಲದೆ, ಕುಟುಂಬದ ವೈಯಕ್ತಿಕ ವಿಚಾರಗಳನ್ನು ಎಳೆದು ತಂದು ಮಾನಹಾನಿ ಮಾಡುವ ರೀತಿಯಲ್ಲಿ ಪೋಸ್ಟ್‌ಗಳನ್ನು ಪ್ರಕಟಿಸಲಾಗಿದ್ದು, ದೂರು ನೀಡದಂತೆ ಪರೋಕ್ಷ ಒತ್ತಡ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ನಿರಂತರ ಟ್ರೋಲಿಂಗ್ ಹಾಗೂ ಸೈಬರ್ ಕಿರುಕುಳದಿಂದ ಬೇಸತ್ತ ವಿಜಯಲಕ್ಷ್ಮಿ, ಸಂಬಂಧಿತ ಖಾತೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ಹಿನ್ನೆಲೆ, ಸೈಬರ್ ಪೊಲೀಸರು ನಕಲಿ ಖಾತೆಗಳನ್ನು ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗಿದ್ದು, ಅಶ್ಲೀಲ ಕಾಮೆಂಟ್‌ಗಳು ಹಾಗೂ ಮಾನಹಾನಿಕರ ಪೋಸ್ಟ್‌ಗಳ ಕುರಿತು ತನಿಖೆ ಆರಂಭಿಸಿದ್ದಾರೆ. ಟ್ರೋಲ್ ಪೇಜ್‌ಗಳು ಮತ್ತು ಸೈಬರ್ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿ ವಿಜಯಲಕ್ಷ್ಮಿ ಇದ್ದಾರೆ.
ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ಕಡಿವಾಣ ಹಾಕಿ, ಇಂತಹ ಕಿರುಕುಳಕ್ಕೆ ಅಂತ್ಯ ಹಾಡುವಂತೆ ಅವರು ಮನವಿ ಮಾಡಿದ್ದಾರೆ.


