ಡಿಕೆಶಿ ಕನಸಿನ ಕೂಸು ಹೆಬ್ಬಾಳ ಟನಲ್ ಗೆ ಮತ್ತೊಂದು ವಿಘ್ನ!
LATEST NEWSಬೆಂಗಳೂರು
S3 Media House
9/2/20261 min read


ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನಸಿನ ಕೂಸಾಗಿರುವ ಹೆಬ್ಬಾಳ ಟನಲ್ ಗೆ ಮೊದಲಿನಿಂದಲೂ ಒಂದಲ್ಲಾ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಇದೀಗ ಈ ಪ್ರಾಜೆಕ್ಟ್ ಗೆ ಮತ್ತೊಂದು ವಿಘ್ನ ಎದುರಾಗಿದ್ದು, ಮತ್ತೆ ತಲೆ ನೋವಾಗಿ ಪರಿಣಮಿಸಿದೆ.
ಪ್ರೊ. ಆಶೀಶ್ ವರ್ಮಾ ನೇತೃತ್ವದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆರು ಜನರಿರುವ ತಜ್ಙರ ತಂಡ ಪ್ರಾಜೆಕ್ಟ್ ರದ್ದು ಮಾಡುವಂತೆ ಕೋರಿ ವರದಿ ನೀಡಿದೆ. ಹೆಬ್ಬಾಳ ಸುರಂಗ ಯೋಜನೆ ಅವೈಜ್ಞಾನಿಕ.. ಟ್ರಾಫಿಕ್ ಕಮ್ಮಿ ಆಗಲ್ಲ. ರಾಜ್ಯಪಾಲರಿಗೆ ಸಲ್ಲಿಸಿದ IISC ತಂಡದ ವರದಿಯಲ್ಲಿ ಬಹಿರಂಗ. ಟನಲ್ ಬೇಡ ಮೆಟ್ರೋ ಮಾಡಿದ್ರೆ ಬೆಸ್ಟ್ ಎಂದು ವರದಿ ನೀಡಿದೆ. 2027, 2031 ರ ಟ್ರಾಫಿಕ್ ಬಗ್ಗೆಯೂ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿದ್ದು, ಟನಲ್ ಗೆ ಪ್ರವಾಹದ ಭೀತಿಯೊಂದಿಗೆ ಅನಾನುಕೂಲ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ರಿಪೋರ್ಟ್ ನಲ್ಲಿ ಏನೇನೇನಿದೆ?
ಮೊದಲ ಸಮಸ್ಯೆ
- ಟನಲ್ ನಿಂದ ಕೇವಲ ಹೆಬ್ಬಾಳದಲ್ಲಿ ಟ್ರಾಫಿಕ್ ಕಡಿಮೆ ಆಗಬಹುದು
- ಆದ್ರೆ ಟನಲ್‌ನ Entry ಮತ್ತು Exit ಪಾಯಿಂಟ್‌ಗಳಲ್ಲಿ ಹೊಸ bottleneck ಉಂಟಾಗುವ ಸಾಧ್ಯತೆ
- ಪ್ರಮುಖವಾಗಿ ವೆಟರ್ನರಿ ಕಾಲೇಜ್ ಬಳಿ ಹಾಗೂ ಎಸ್ಟೀಮ್ ಮಾಲ್ ಬಳಿ ಟ್ರಾಫಿಕ್
ಎರಡನೇ ಸಮಸ್ಯೆ:
- Esteem Mall Exit ಬಳಿ ಸುಮಾರು 60 ಮೀಟರ್ radius ಇರುವ ತಿರುವು ಇದೆ.
- ಈ ತಿರುವಿನಲ್ಲಿ ವಾಹನಗಳ ವೇಗ ಸುಮಾರು 60 kmph → 40 kmph ಗೆ ಇಳಿಯಬೇಕಾಗಬಹುದು.
- ವೇಗ ಕಡಿಮೆಯಾದರೆ ಒಂದೇ ಸಮಯದಲ್ಲಿ ಸಾಗುವ ವಾಹನಗಳ ಸಂಖ್ಯೆಯೂ ಕಡಿಮೆಯಾಗುತ್ತದೆ.
ಸಮಸ್ಯೆ ಮೂರು
- ಹೆಬ್ಬಾಳ ಲೇಕ್ ಇರೋ ಕಾರಣ ಪ್ರವಾಹದ ಅಪಾಯ ಇದೆ
- ಭಾರೀ ಮಳೆಯ ಸಂದರ್ಭದಲ್ಲಿ ನೀರು ಟನಲ್‌ಗೆ ನುಗ್ಗುವ ಅಪಾಯ
- ಹೆಬ್ಬಾಳ್ ಕೆರೆ ಮತ್ತು ಈಗಿರುವ flyover piers ನಡುವೆ ಮಣ್ಣಿನ support ಸೀಮಿತ
- ಪ್ರತಿ ಪ್ರಯಾಣಿಕನಿಗೆ ಬರುವ capital cost, Metroಗಿಂತ ಸುಮಾರು 6 ಪಟ್ಟು ಹೆ
- Hebbal Tunnel ನಿಂದ ಪ್ರತಿ ಪ್ರಯಾಣಿಕನಿಗೆ 5.23 ರೂ. ವೆಚ್ಚ
- ಆಡ್ರೌಂಡರ್ಗ್ರೌಂಡ್ ಮೆಟ್ರೋ ಯಿಂದ ಕೇವಲ 0.86 ರು. ವೆಚ್ಚ..


