ರಾಜ್ಯ ಸರಕಾರದಿಂದ ಬರಪೀಡಿತ ತಾಲ್ಲೂಕುಗಳ ಘೋಷಣೆ! ಇದ್ರಲ್ಲಿ ನಿಮ್ಮ ತಾಲ್ಲೂಕು ಇದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ!
ಸಾರ್ವಜನಿಕ ಸಮಸ್ಯೆಗಳುರಾಜ್ಯLATEST NEWSಕೃಷಿ
S3 Media House
8/28/20261 min read


ರಾಜ್ಯ ಸರಕಾರ ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಇದರಲ್ಲಿ ಕೆಲವು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳು, ಇನ್ನು ಕೆಲವು ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕುಗಳು ಹಾಗೂ ಇನ್ನು ಕೆಲವು ತಾಲ್ಲೂಕುಗಳನ್ನು ಪುನರ್ ಪರಿಶೀಲನೆ ಮಾಡಬೇಕಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಡಿಸಿಗಳ ವರದಿ ಅನ್ವಯ101 ತಾಲೂಕಿಗಳನ್ನು ಬರ ಎಂದು ಘೋಷಣೆಗೆ ಅರ್ಹವಾಗಿದ್ದು, ಬರ ನಿರ್ವಹಣೆಗೆ ಒಟ್ಟು 635 ಕೋಟಿ ರೂ. ಮೀಸಲಿಡಲಾಗಿದೆ ಎಂದರು. ಇನ್ನು ಕುಡಿಯುವ ನೀರಿಗೆ ಉಪಯೋಗಿಸಲು 117 ಕೋಟಿ ರೂ. ಮೀಸಲಿಟ್ಟಿರುವುದಾಗಿ ತಿಳಿಸಿದರು.
134 ತಾಲೂಕುಗಳು ಬರ ಎಂದು ಘೋಷಿಸಲು ಪೂರಕ ಅಂಶಗಳಿದ್ದು 134 ತಾಲೂಕುಗಳಿಗೂ ಟೀಂ ಕಳುಹಿಸಲಾಗಿತ್ತು ಇದರಲ್ಲಿ 89 ತಾಲೂಕಿನಲ್ಲಿ ತೀವ್ರ ಬರ, 12 ತಾಲೂಕಿನಲ್ಲಿ ಸ್ವಲ್ಪ ಬರ ಇದೆ. ಶೇಕಡಾ 71ರಷ್ಟು ಬಿತ್ತನೆಯಾದ ಬೆಳೆ ಒಣಗಿ ಹೋಗಿವೆ. 60 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು, ರಾಗಿ, ಶೇಂಗಾ, ಭತ್ತ, ತೊಗರಿ ಬೆಳೆಗಳು ಒಣಗಿಹೋಗಿವೆ.
ಜೊತೆಗೆ 3 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಒಣಗಿಹೋಗಿವೆ. 3 ಲಕ್ಷ ಹೆಕ್ಟರ್ ಮೆಣಸಿನಕಾಯಿ, ಟೊಮ್ಯಾಟೋ, ಈರುಳ್ಳಿ ಹಾಳಾಗಿದೆ. ಈ ಸಂಬಂಧ ಬರ ಪರಿಹಾರಕ್ಕಾಗಿ ಕೇಂದ್ರ ಸರಕಾರದ ಮೊರೆ ಹೋಗುತ್ತೇವೆ ಎಂದು ಡಿಸಿಎಂ ತಿಳಿಸಿದ್ದಾರೆ.
ತೀವ್ರ ಬರಪೀಡಿತ ತಾಲ್ಲುಕುಗಳ ವಿವಿರ:
ಬೆಂಗಳೂರು ನಗರ ಜಿಲ್ಲೆ: ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಯಲಹಂಕ.
ಬೆಂಗಳೂರು ಗ್ರಾಮಾಂತರ ಜಿಲ್ಲೆ: ಹೊಸಕೋಟೆ, ನೆಲಮಂಗಲ.
ಬೆಂಗಳೂರು ದಕ್ಷಿಣ ಜಿಲ್ಲೆ : ಮಾಗಡಿ, ರಾಮನಗರ.
ಕೋಲಾರ ಜಿಲ್ಲೆ : ಬಂಗಾರಪೇಡೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆ.ಜಿ.ಎಫ್.
ಚಿಕ್ಕಬಳ್ಳಾಪುರ ಜಿಲ್ಲೆ: ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡುಬಂಡೆ, ಶಿಡ್ಲಘಟ್ಟ, ಚೇಳೂರು, ಮಂಚೇನಹಳ್ಳಿ.
ತುಮಕೂರು ಜಿಲ್ಲೆ: ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ , ತುಮಕೂರು, ತುರುವೇಕೆರೆ.
ಚಿತ್ರದುರ್ಗ ಜಿಲ್ಲೆ : ಚಳ್ಳಕೆರೆ, ಹಿರಿಯೂರು, ಹೊಸದುರ್ಗ.
ದಾವಣಗೆರೆ ಜಿಲ್ಲೆ : ಚನ್ನಗಿರಿ, ಹೊನ್ನಾಳಿ, ನ್ಯಾಮಟಿ.
ಚಾಮರಾಜ ನಗರ ಜಿಲ್ಲೆ : ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಯಳಂದೂರು, ಹಾನೂರು.
ಮೈಸೂರು ಜಿಲ್ಲೆ : ಹೆಗ್ಗದೇವನಕೋಟೆ, ಹುಣಸೂರು, ಕೃಷ್ಣರಾಜನಗರ, ಮೈಸೂರು, ನಂಜನಗೂಡು, ಟಿ.ನರಸೀಪುರ, ಸರಗೂರು, ಸಾಲಿಗ್ರಾಮ.
ಮಂಡ್ಯ ಜಿಲ್ಲೆ : ಕೃಷ್ನರಾಜಪೇಟೆ, ಮಳವಳ್ಳಿ, ಮಂಡ್ಯ. ನಾಗಮಂಗಲ, ಶ್ರೀರಂಗಪಟ್ಟಣ.
ಬಳ್ಳಾರಿ ಜಿಲ್ಲೆ : ಬಳ್ಳಾರಿ , ಸಂಡೂರು, ಕರಗೂಡು, ಕಂಪ್ಲಿ.
ಕೊಪ್ಪಳ ಜಿಲ್ಲೆ: ಗಂಗಾವತಿ, ಕೂಕನೂರು, ಕನಕಗಿರಿ.
ರಾಯಚೂರು ಜಿಲ್ಲೆ: ದೇವದುರ್ಗ, ಮಸ್ಕಿ, ಅರಕೆರೆ.
ಬೀದರ್ ಜಿಲ್ಲೆ : ಬೀದರ್, ಬಸವಕಲ್ಯಾಣ, ಹುಮ್ನಾಬಾದ್.
ಬಾಗಲಕೋಟೆ ಜಿಲ್ಲೆ: ಬಾಗಲಕೋಟೆ,ಬೀಳಗಿ, ಜಮಖಂಡಿ, ಗುಳೆದಗುಡ್ಡ, ಇಕ್ಕಳ.
ವಿಜಯಪುರ ಜಿಲ್ಲೆ: ವಿಜಯಪುರ, ನಿಡಗುಂದಿ, ಕೊಲ್ಹಾರ.
ಗದಗ ಜಿಲ್ಲೆ: ಗಜೇಂದ್ರಗಡ.
ಹಾಸನ ಜಿಲ್ಲೆ: ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ.
ಚಿಕ್ಕಮಗಳೂರು ಜಿಲ್ಲೆ: ಅಜಮ್ ಪುರ.
ಯಾದಗಿರಿ ಜಿಲ್ಲೆ : ಶಹಾಪುರ.
ವಿಜಯನಗರ ಜಿಲ್ಲೆ: ಹೊಸಪೇಟೆ, ಹಡಗಲಿ, ಅಗರಿ ಬೊಮ್ಮನಹಳ್ಳಿ, ಹರಪ್ಪನಹಳ್ಳಿ.
ಸಾಧಾರಣ ಬರಪೀಡಿತ ತಾಲ್ಲೂಕುಗಳ ವಿವಿರ:
ಬೆಂಗಳೂರು ಗ್ರಾಮಾಂತರ ಜಿಲ್ಲೆ : ದೇವನಹಳ್ಳಿ.
ದಾವಣಗೆರೆ ಜಿಲ್ಲೆ: ದಾವಣಗೆರೆ
ಮಂಡ್ಯ ಜಿಲ್ಲೆ: ಮದ್ದೂರು, ಪಾಂಡವಪುರ.
ರಾಯಚೂರು ಜಿಲ್ಲೆ: ಲಿಂಗಸೂರು, ರಾಯಚೂರು.
ಚಿಕ್ಕಮಗಳೂರು ಜಿಲ್ಲೆ: ಕೊಪ್ಪ, ನರಸಿಂಹರಾಜಪುರ, ತರಿಕೆರೆ.
ಕೊಡಗು ಜಿಲ್ಲೆ: ಸೋಮವಾಪೇಟೆ.
ಉತ್ತರ ಕನ್ನಡ ಜಿಲ್ಲೆ: ಮುಂದಗೋಡು, ಯಲ್ಲಾಪುರ.
ಆರ್.ಅಶೋಕ್ ಪ್ರತಿಕ್ರಿಯೆ
ಬರ ತಾಲ್ಲೂಕುಗಳ ಘೋಷಣೆ ಸಂಬಂಧ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಗಿದೆ ಸರಕಾರದ ಬರ ಘೋಷಣೆ. 4 ತಿಂಗಳ ಬಳಿಕ ಬರ ಪೀಡಿತ ತಾಲೂಕುಗಳನ್ನ ಘೋಷಿಸಿದ್ದಾರೆ. 4 ತಿಂಗಳ ಹಿಂದೆಯೇ ನಾನು ಸರ್ಕಾರಕ್ಕೆ ಪತ್ರವನ್ನ ಬರೆದಿದ್ದೆ. ಬರಪೀಡಿತ ಸ್ಥಳಕ್ಕೆ ನಾನು, ಬಿಜೆಪಿ ಅಧ್ಯಯನ ತಂಡ ಹೋಗಿತ್ತು. 175 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಬೇಕಿತ್ತು. ಆದರೆ ಸರಕಾರದ ಭೊಕ್ಕಸದಲ್ಲಿ ಹಣ ಇಲ್ಲದ ಕಾರಣಕ್ಕೆ ನಾಲ್ಕು ತಿಂಗಳು ತಡವಾಗಿ ಘೋಷಣೆ ಮಾಡಿದ್ದಾರೆ. ಬರದ ಹಿನ್ನೆಲೆ ಜನ ಈಗಾಗಲೇ ಗುಳೆ ಹೋಗಲು ಶುರು ಮಾಡಿದ್ದಾರೆ ಎಂದು ಗುಡುಗಿದ್ದಾರೆ.


