ನಟ ದುನಿಯಾ ವಿಜಯ್ & ನಾಗರತ್ನ ದಾಂಪತ್ಯ ಅಂತ್ಯ!

ಸಿನಿಮಾLATEST NEWSಬೆಂಗಳೂರು

S3 Media House

9/3/20261 min read

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಹಾಗೂ ಪತ್ನಿ ನಾಗರತ್ನರ ದಾಂಪತ್ಯ ಇಂದಿಗೆ ಅಂತ್ಯವಾಗಿದೆ. ಹೈ ಕೋರ್ಟ್ ದ್ವಿಸದಸ್ಯ ಪೀಠ ಇಬ್ಬರ ನಡುವಿನ ವಿವಾಹ ವಿಚ್ಛದಕ್ಕೆ ಅಸ್ತು ಎಂದಿದೆ. ಪತ್ನಿ ನಾಗರತ್ನಗೆ 2 ಕೋಟಿ ಜೀವನಾಂಶ ನೀಡುವಂತೆ ಆದೇಶ ಮಾಡಿದ್ದು, ಮಕ್ಕಳ ಜವಾಬ್ದಾರಿಯನ್ನು ವಿಜಯ್ ಹೆಗಲಿಗೆ ಹಾಕಿದೆ.

ದುನಿಯಾ ವಿಜಯ್ ದಾಂಪತ್ಯ ಜೀವನದ ದಾರಿ.

- 1999 – ದುನಿಯಾ ವಿಜಯ್ ಮತ್ತು ನಾಗರತ್ನ ವಿವಾಹವಾದರು.
- ದಂಪತಿಗೆ ಮೂರು ಮಕ್ಕಳು ಇದ್ದಾರೆ.
- 2013ರಲ್ಲಿ ವಿಜಯ್ ಮೊದಲ ಬಾರಿಗೆ ನಾಗರತ್ನರಿಂದ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೊರೆ ಹೋದರು.
- ವಿಜಯ್ ಅವರು ವೈವಾಹಿಕ ಕ್ರೌರ್ಯ ಮತ್ತು ಪರಿತ್ಯಾಗ ಆರೋಪಗಳನ್ನು ಮಾಡಿದ್ದರು.

  • ವಿಚ್ಛೇದನ ಪ್ರಕರಣದ ನಡುವೆ ಮಕ್ಕಳ ಪಾಲನೆ ಪೋಷಣೆ ವಿಚಾರ ಸಹ ಚರ್ಚೆಗೆ ಬಂದಿತ್ತು.
    - 2014ರಲ್ಲಿ ವಿಜಯ್ ಮತ್ತು ನಾಗರತ್ನ ನಡುವೆ ಸಂಧಾನದ ಪ್ರಯತ್ನ ನಡೆಯಿತು.
    - ಇಬ್ಬರೂ ಮತ್ತೆ ಒಟ್ಟಿಗೆ ಬದುಕಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಮೊದಲ ವಿಚ್ಛೇದನ ಅರ್ಜಿಹಿಂಪಡೆಯಲಾಯಿತು.
    - ನಂತರ ಇಬ್ಬರ ದಾಂಪತ್ಯದಲ್ಲಿ ಮತ್ತೆ ಭಿನ್ನಾಭಿಪ್ರಾಯ ಉಂಟಾಯಿತು.
    - 2016ರಲ್ಲಿ ವಿಜಯ್ ಅವರು ಕೀರ್ತಿ ಪಟ್ಟಾಡಿ ಅವರನ್ನು ವಿವಾಹವಾದರು.
    - 2018ರಲ್ಲಿ ನಾಗರತ್ನ ಮತ್ತು ಕೀರ್ತಿ ನಡುವೆ ಗಲಾಟೆ
    - ಈ ಬೆಳವಣಿಗೆಗಳ ನಂತರ ವಿಜಯ್ ಮತ್ತೆ ನಾಗರತ್ನರಿಂದ ವಿಚ್ಛೇದನ ಪಡೆಯಲು ಮುಂದಾದರು.
    - 29 ಅಕ್ಟೋಬರ್ 2018ರಂದು ವಿಜಯ್ ಎರಡನೇ ಬಾರಿಗೆ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದರು.
    - ಎರಡನೇ ಅರ್ಜಿಯಲ್ಲೂ ಪ್ರಮುಖ ಆಧಾರವಾಗಿ ವೈವಾಹಿಕ ಕ್ರೌರ್ಯ (cruelty) ಆರೋಪವನ್ನು ಮುಂದಿಟ್ಟಿದ್ದರು
    - 13 ಜೂನ್ 2024ರಂದು ಬೆಂಗಳೂರಿನ ಶಾಂತಿನಗರ ಫ್ಯಾಮಿಲಿ ಕೋರ್ಟ್ ವಿಜಯ್ ಅವರ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತು.
    - ವಿಜಯ್ ಅವರು ನಾಗರತ್ನ ವಿರುದ್ಧ ಮಾಡಿದ್ದ ಕ್ರೌರ್ಯದ ಆರೋಪಗಳನ್ನು ಸಮರ್ಪಕವಾಗಿ ಸಾಬೀತುಪಡಿಸಿಲ್ಲ ಎಂದು ಕೋರ್ಟ್ ತೀರ್ಮಾನಿಸಿತ.
    - ಸೇಷನ್ಸ್ ಕೋರ್ಟ್ ಆದೇಶದ ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಕೆ ಮಾಡಿದ ದುನಿಯಾ ವಿಜಯ್.
    - 2024 ರಲ್ಲೇ ಹೈಕೋರ್ಟ್ ವಿಚ್ಚೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ ದುನಿಯಾ ವಿಜಯ್.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.