ಹನೂರು ಎನ್ಕೌಂಟರ್ ಪ್ರಕರಣ ಸಿಐಡಿ ಗೆ ವರ್ಗಾವಣೆ!
LATEST NEWSಬೆಂಗಳೂರುಅಪರಾಧರಾಜ್ಯ
S3 Media House
8/25/20261 min read


ರಾಜ್ಯದಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಚಾಮರಾಜನಗರ ಜಿಲ್ಲೆಯ ಹನೂರು ಎನ್ಕೌಂಟರ್ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸಿಐಡಿ ವಿಶೇಷ ಘಟಕದಿಂದ ಮುಂದಿನ ತನಿಖೆ ನಡೆಯಲಿದ್ದು, ಈ ಸಂಬಂಧ ಡಿಜಿಐಜಿಪಿ ಎಂ. ಸಲೀಂ ಚಾಮರಾಜನಗರ ಎಸ್ಪಿ ಗೆ ಸೂಚನೆ ನೀಡಿದ್ದಾರೆ.
ಶೂಟೌಟ್ಗೆ ಸಂಬಂಧಿಸಿದಂತೆ ನಾಲ್ಕು ಎಫ್ಐಆರ್ ದಾಖಲಾಗಿದ್ದು, ನಾಲ್ವರು ಇನ್ಸಪೆಕ್ಟರ್ಗಳು ಕೂಡಲೇ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡಲೇ ಸಿಐಡಿಗೆ ನೀಡುವಂತೆ ಎಂ. ಸಲೀಂ ಆದೇಶ ಹೊರಡಿಸಿದ್ದಾರೆ. ಚಾಮರಾಜನಗರದ ರಾಮಪುರಂ ಪೊಲೀಸ್ ಠಾಣೆ, ಹನೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.


