ಫ್ರಿಡ್ಜ್ ಸ್ಫೋಟಗೊಂಡು ಇಡೀ ಕುಟುಂಬವೇ ದಾರುಣ ಸಾವು!
ಗಣೇಶೋತ್ಸವದ ನಡುವೆ ಇಡೀ ಗಲ್ಲಿಯಲ್ಲಿ ಸೂತಕದ ಛಾಯೆ!
ರಾಜ್ಯLATEST NEWSಅಪಘಾತ
S3 Media House
9/17/20261 min read


ಸಂಭ್ರಮದಿಂದ ಗಣೇಶೋತ್ಸವ ಆಚರಿಸುತ್ತಿದ್ದರ ನಡುವೆ ಮನೆಯೊಂದರಲ್ಲಿ ಫ್ರಿಡ್ಜ್ ಸ್ಪೋಟಗೊಂಡು ಇಡೀ ಕುಟುಂಬವೇ ಮಸಣ ಸೇರಿದ ದಾರುಣ ಘಟನೆ ನಡೆದಿದೆ. ಬೆಳಗಾವಿ ನಗರದ ಚಾವಟ ಗಲ್ಲಿಯಲ್ಲಿ ದುರ್ಘಟನೆ ನಡೆದಿದ್ದು, ನಾಲ್ಕು ಮಂದಿ ಸ್ಥಳದಲ್ಲಯೇ ಸಾವನ್ನಪ್ಪಿದ್ದರು. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಹ ಮೃತಪಟ್ಟಿದ್ದಾರೆ. ಇದರಿಂದ ಸ್ಪೋಟಕ್ಕೆ ಬಲಿಯಾದವರ ಸಂಖ್ಯೆ 6 ಕ್ಕೆ ಏರಿಕೆಗೊಂಡಿದೆ.
ರೋಷನ್ ದಮೋನೆ (21) ಗಜಾನನ ದಮೋನೆ (61) ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರೆ. ಇನ್ನುಳಿದಂತೆ ಸ್ಥಳದಲ್ಲೇ ಭಾರತಿ ರಾಜಾರಾಮ ದಮೋನೆ (50), ಶಾರದಾ ಗಜಾನನ ದಮೋನೆ (45), ಪ್ರಿಯಾ ಗಜಾನನ ದಮೋನೆ (28) ಹಾಗೂ ಗಂಗಾ ಗಜಾನನ ದಮೋನೆ (25) ಮೃತಪಟ್ಟಿದ್ದರು.


