ವಿದ್ಯಾರ್ಥಿಗಳಿಗೆ ಗ್ಯಾರೆಂಟಿ ಬಸ್ ಪಾಸ್! ಪಡೆಯುದು ಹೇಗೆ ?

ಶಿಕ್ಷಣಉಪಯುಕ್ತ

S3 Media House

6/5/20261 min read

ಪ್ರಸ್ತುತ ಸಾಲಿನಿಂದಲೇ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ. ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಡಿ. ಕೆ.ಶಿವಕುಮಾರ್ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಡಿಕೆ ಶಿವಕುಮಾರ್ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಬಸ್ ಪಾಸ್ ಗ್ಯಾರಂಟಿ ಸಿಕ್ಕಿದೆ. ಹೌದು, ಪ್ರಸ್ತುತ ಸಾಲಿನಿಂದಲೇ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ.

ಸದ್ಯ ಬಿಎಂಟಿಸಿಯಲ್ಲಿ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಇರುವ ನಿಯಮಗಳು ಮತ್ತು ಹಂತಗಳು ಏನೇನು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್!

ಬೇಕಾಗುವ ದಾಖಲೆಗಳು: ವಿದ್ಯಾರ್ಥಿಯ ಆಧಾರ್ ಕಾರ್ಡ್, ಕಾಲೇಜ್ ಅಡ್ಮಿಷನ್ ರಶೀದಿ ಮತ್ತು ಎರಡು ಪಾಸ್ಪೋರ್ಟ್ ಸೈಜ್ ಫೋಟೋಗಳು.

ಅರ್ಜಿ ಸಲ್ಲಿಸುವ ವಿಧಾನ: ಯಾವುದೇ ಸೈಬರ್ ಸೆಂಟರ್, ಬೆಂಗಳೂರು ಒನ್ ಅಥವಾ ನಿಮ್ಮ ಮೊಬೈಲ್ ಮೂಲಕವೇ 'ಸೇವಾಸಿಂಧು' ಅಪ್ಲಿಕೇಶನ್ನಲ್ಲಿ ಅರ್ಜಿ ಸಲ್ಲಿಸಬೇಕು.

ಶುಲ್ಕ: ಸೈಬರ್ ಸೆಂಟರ್ನಲ್ಲಿ ಅರ್ಜಿ ನಮೂನೆಗೆ 10 ರೂಪಾಯಿ ಹಾಗೂ ಅರ್ಜಿ ಸಲ್ಲಿಕೆಯ ಸೇವಾ ಶುಲ್ಕ 100 ರೂಪಾಯಿ ಇರುತ್ತದೆ.

ಮುಂದಿನ ಹಂತ: ಆನ್ಲೈನ್ನಲ್ಲಿ ಅರ್ಜಿ ಹಾಕಿದ ನಂತರ, ವಿದ್ಯಾರ್ಥಿ ಓದುತ್ತಿರುವ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ ಸೀಲ್ ಮತ್ತು ಸಹಿ ಹಾಕಿಸಬೇಕು. ಬಳಿಕ ಅರ್ಜಿ ಬಿಎಂಟಿಸಿ ಪಾಸ್ ಸೆಕ್ಷನ್ಗೆ ಹೋಗಿ, ಪರಿಶೀಲನೆಯ ನಂತರ ನಿಮ್ಮ ಮೊಬೈಲ್ಗೆ ಅಪ್ರೂವಲ್ ಮೆಸೇಜ್ ಬರುತ್ತದೆ.

ಪಾಸ್ ಎಲ್ಲಿ ಸಿಗುತ್ತದೆ?: ಮೆಸೇಜ್ ಬಂದ ಮೇಲೆ ಬೆಂಗಳೂರಿನ ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಮತ್ತು ಆನೇಕಲ್ ಬಸ್ ಸ್ಟ್ಯಾಂಡ್ಗಳಲ್ಲಿ ಹಣ ಪಾವತಿಸಿ ಪಾಸ್ ಪಡೆಯಬಹುದು.

ಇಲ್ಲಿಯವರೆಗೆ ಇದ್ದ ಪಾಸಿನ ದರಗಳ ಪಟ್ಟಿ ಹೀಗಿದೆ:

1 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಾಸ್ ಉಚಿತ, ಕೇವಲ 150 ರೂಪಾಯಿ ಸೇವಾ ಶುಲ್ಕ.

8 ರಿಂದ 10ನೇ ತರಗತಿಯ ಬಾಲಕರಿಗೆ ಒಟ್ಟು 750 ರೂಪಾಯಿ.

ಪಿಯುಸಿ ವಿದ್ಯಾರ್ಥಿಗಳಿಗೆ ಒಟ್ಟು 1,050 ರೂಪಾಯಿ.

ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಒಟ್ಟು 1,300 ರೂಪಾಯಿ.

ಇನ್ನು ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಟ್ಟು 1,830 ರೂಪಾಯಿ ಇತ್ತು.

ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ವಿದ್ಯಾರ್ಥಿಗಳಿಗೆ ಕೇವಲ 150 ರೂಪಾಯಿ ಸೇವಾ ಶುಲ್ಕ ಮಾತ್ರ ಇತ್ತು.

ಆದರೆ ಇನ್ಮುಂದೆ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಸಿಗುವ ಸಾಧ್ಯತೆ ದಟ್ಟವಾಗಿದೆ! ಸದ್ಯದಲ್ಲೇ ಹೊಸ ನಿಯಮ ಜಾರಿಗೆ ಬರಲಿದ್ದು, ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ!

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.