ಮೊಮ್ಮಗಳನ್ನು ನೋಡಲು ಅಂಗಲಾಚುತ್ತಿರುವ ದೇವನಹಳ್ಳಿ ಸರಕಾರಿ ಕಾಲೇಜು ಉಪನ್ಯಾಸಕಿ! ಕಾರಣ ಏನು ಅಂತ ತಿಳಿಯಬೇಕಾದ್ರೆ ಈ ಕಂಪ್ಲೀಟ್ ಸ್ಟೋರಿ ಓದಿ!

LATEST NEWSಬೆಂಗಳೂರುಬೆಂಗಳೂರು ಗ್ರಾಮಾಂತರಅಪರಾಧ

S3 Media House

10/5/20261 min read

ಹೌದು, ತನ್ನ ಸ್ವಂತ ಮೊಮ್ಮಗಳನ್ನು ನೋಡಲು ಅಜ್ಜಿ ಅಂಗಲಾಚುತ್ತಿರುವಂತಹ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ದೇವನಹಳ್ಳಿಯ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕಿ ಕವಿತಾ ಇದೀಗ ಮೊಮ್ಮಗಳನ್ನು ನೋಡಲು ಗೋಗರೆಯುತ್ತಿದ್ದಾರೆ.

ಅಂದಹಾಗೆ ಇತ್ತೀಚೆಗಷ್ಟೆ ಮೊಮ್ಮಗಳನ್ನು ನೋಡಲು ಬಂದಿದ್ದ ಅಜ್ಜಿಯ ಮೇಲೆ ಅಳಿಯ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ದೇವನಹಳ್ಳಿ ಸರ್ಕಾರಿ ಕಾಲೇಜಿನ ಉಪನ್ಯಾಸಕಿ ಕವಿತಾ ಅವರ ಮೇಲೆ ಅಳಿಯ ಮಂಜುನಾಥ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಕವಿತಾ ಅವರ ಪುತ್ರಿ ಶರಣ್ಯ ಅವರು 2017ರಲ್ಲಿ ಮಂಜುನಾಥ್ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಆರಂಭದಿಂದಲೇ ದಂಪತಿ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದೆ. ಮಂಜುನಾಥ್ ಅವರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಫ್ಯಾಷನ್ ಡಿಸೈನ್‌ನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದ ಶರಣ್ಯ, ಉತ್ತಮ ಕಲಾವಿದೆಯೂ ಆಗಿದ್ದರು. ಅವರ ಹಲವು ಚಿತ್ರಗಳಿಗೆ ಪ್ರಶಸ್ತಿಗಳು ಲಭಿಸಿದ್ದವು. ಆದರೆ ಮದುವೆಯ ಬಳಿಕ ಪೇಂಟಿಂಗ್ ಮಾಡದಂತೆ ಪತಿ ತಡೆದಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪತಿಯ ಕಿರುಕುಳದಿಂದ ಬೇಸತ್ತು ಸುಮಾರು ಆರು ತಿಂಗಳ ಹಿಂದೆ ಶರಣ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಏಳು ವರ್ಷದ ಮಗಳನ್ನು ಗಮನದಲ್ಲಿಟ್ಟುಕೊಂಡು, ಆ ಸಂದರ್ಭದಲ್ಲಿ ತಾಯಿ ಕವಿತಾ ಅವರು ಅಳಿಯನ ವಿರುದ್ಧ ದೂರು ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ಇದೀಗ ಮೊಮ್ಮಗಳನ್ನು ನೋಡಲು ತೆರಳಿದ್ದ ಕವಿತಾ ಅವರ ಮೇಲೆಯೇ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ತಿಂಗಳ ಮೂರನೇ ತಾರೀಖು ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಏಳು ವರ್ಷದ ಮೊಮ್ಮಗಳನ್ನು ನೋಡಲು ಬಾರದಂತೆ ತಡೆದು ಹಲ್ಲೆ ನಡೆಸಲಾಗಿದೆ ಎಂದು ಕವಿತಾ ಆರೋಪಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿರುವ ಕವಿತಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಅಳಿಯ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಮಗಳನ್ನ ಕಳೆದುಕೊಂಡ ನೋವಿನಲ್ಲಿರುವ ಅಜ್ಜಿ, ಇದೀಗ ಮೊಮ್ಮಗಳನ್ನು ನೋಡಲು ಅವಕಾಶ ನೀಡುವಂತೆ ಅಂಗಲಾಚುತ್ತಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.