ಆರೋಗ್ಯ ಇಲಾಖೆಯಿಂದ ಹೋಟೆಲ್ ಗಳಿಗೆ ಹೊಸ ಮಾರ್ಗಸೂಚಿ! ಏನೇನಿದ ಈ ಮಾರ್ಗಸೂಚಿಯಲ್ಲಿ ಗೊತ್ತಾ?
ಮಾರ್ಗಸೂಚಿ ಪಾಲನೆ ಮಾಡಲಿಲ್ಲವೆಂದ್ರು ಬೀಳುತ್ತೆ ನಿಮ್ಮ ಹೋಟೆಲ್ ಗೆ ಬೀಗ!
ಸಾರ್ವಜನಿಕ ಸಮಸ್ಯೆಗಳುಆರೋಗ್ಯLATEST NEWSರಾಜ್ಯ
S3 Media House
8/26/20261 min read


ಇತ್ತೀಚೆಗೆ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಹಲವೆಡೆ ಆರೋಗ್ಯ ಇಲಾಖೆ ಹೋಟೆಲ್ ಗಳ ಮೇಲೆ ದಾಳಿ ಮಾಡಿ ಹೋಟೆಲ್ ಗಳಲ್ಲಿನ ಕರ್ಮಕಾಂಡವನ್ನು ಬಯಲಿಗೆಳಿದಿತ್ತು. ಅವಧಿ ಮೀರಿದ ಆಹಾರ , ಗುಣಮಟ್ಟತೆ ಇಲ್ಲದಿರುವುದು , ಸ್ವಚ್ಚತೆ ಕಾಪಾಡದಿರುವುದು ಕಂಡು ಆರೋಗ್ಯ ಸಚಿವರು ಸೇರಿದಂತೆ ಅಧಿಕಾರಿಗಳ ಹೋಟೆಲ್ ಮಾಲೀಕರ ವಿರುದ್ಧ ಗರಂ ಆಗಿದ್ದರು. ಗ್ರಾಹಕರ ಬಳಿ ದುಬಾರಿ ದುಡ್ಡು ಪೀಕುವ ಹೈಶಾರಾಮಿ ಹೋಟೆಲ್ ಗಳು ಸಹ ಗುಣಮಟ್ಟತೆ ಕಾಪಾಡದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು.
ಇದರಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಇದೀಗ ಹೋಟೆಲ್ ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕಟ್ಟುನಿಟ್ಟಾಗಿ ಮಾರ್ಗಸೂಚಿಯನ್ನು ಪಾಲಿಸುವಂತೆ ಹೋಟೆಲ್ ಮಾಲೀಕರಿಗೆ ಆದೇಶಿಸಿದೆ. ಮಾರ್ಗಸೂಚಿ ಉಲ್ಲಂಘಿಸಿದಲ್ಲಿ ದಂಡದ ಜೊತೆ ಹೋಟೆಲ್ ಗಳಿಗೆ ಬೀಗ ಜಡಿಯುವ ಸಾಧ್ಯತೆ ಸಹ ಇದೆ ಎಂದು ಎಚ್ಚರಿಸಿದೆ.
ಹೋಟೆಲ್ ಮಾಲೀಕರಿಗೆ ಆಹಾರ ತಯಾರಿಕರಿಗೆ ಕಡ್ಡಾಯವಾಗಿ ಮಾರ್ಗಸೂಚನೆಯನ್ನ ಪಾಲನೆ ಸೂಚನೆ.
16 ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲನೆ ಮಾಡಲು ಸೂಚನೆ
FSSAI ಪರವಾನಿಗೆ ನೋಂದಣಿ ಮಾಡುವುದು ಕಡ್ಡಾಯ
01 ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಮಾಡಬೇಕು.
02 ಆಹಾರ ತಯಾರಿಕೆಗೆ ಕಚ್ಚಾವಸ್ತು ಖರೀದಿ ಮತ್ತು ಸಂಗ್ರಹಣೆ ಸರಿಯಾಗಿ ಮಾಡಬೇಕು
03 ಅವಧಿ ಮೀರಿದ ಹಾಗೂ ಬಳಕೆಗೆ ಯೋಗ್ಯವಲ್ಲದ ಪದಾರ್ಥಗಳನ್ನ ವಿಲೇವಾರಿ ಮಾಡಬೇಕು
04 ಅಡುಗೆ ಮನೆ ಹಾಗೂ ಆಹಾರ ಇಡುವ ಸ್ಥಳ ಸ್ವಚ್ಛತೆ ಇಂದ ಇಡಬೇಕು
05 ಆಹಾರ ತಯಾರಿಕೆಗೆ ಬಳಸುವ ಎಲ್ಲ ಸಾಮಾನುಗಳನ್ನು ಸ್ಯಾನಿಟೈಸ್ ಹಾಕಿ ಸ್ವಚ್ಛವಾಗಿಡಬೇಕು
06 ಜಿರಳೆ. ಇಲಿ. ಇತರೆ ಹಾನಿಕಾರಕ ಕೀಟಗಳ ನಿಯಂತ್ರಣಕ್ಕೆ ಪೇಸ್ಟ್ ಕಂಟ್ರೋಲ್ ಕ್ರಮ ಕೈಗೊಳ್ಳಬೇಕು
07 ಹಾಲು. ಮೊಟ್ಟೆ. ಮೊಸರು. ಪನ್ನೀರ್. ಮಾಂಸ ಇವುಗಳನ್ನು ಇಲಾಖೆ ಮಾನದಂಡಗಳನ್ವಯ ನಿಗದಿತ ಸ್ಥಳದಲ್ಲಿ ಇಡಬೇಕು.
08 ಆಹಾರ ತಯಾರಿಸುವ ಸಿಬ್ಬಂದಿ ಸ್ವಚ್ಛ ಉಡುಪು. ಹೆಡ್ ಕ್ಯಾಪ್. ಹೆಡ್ ಕವರ್. ಏಪ್ರನ್. ಸೇರಿ ಹಲವು ಸ್ವಚ್ಛ ಸುರಕ್ಷತಾ ಸಾಧನ ಬಳಕೆ ಮಾಡಬೇಕು.
09 ಆಹಾರ ತಯಾರಿಕೆಗೆ ಹಾಗೂ ಗ್ರಾಹಕರಿಗೆ ಶುದ್ಧ ಸುರಕ್ಷಿತ ನೀರು ಬಳಸಬೇಕು.
10 ಆಹಾರ ತ್ಯಾಜ್ಯ ನಿರ್ವಹಣೆ ಸೂಕ್ತವಾದ ಕಸದ ಬುಟ್ಟಿಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು
11 ಆಹಾರ ನಿರ್ವಹಿಸುವ ಸಿಬ್ಬಂದಿಗಳಿಗೆ ಆರೋಗ್ಯ ತರಬೇತಿ ನೀಡಬೇಕು
12 ಆಹಾರ ತಯಾರಿಕೆಗೆ ಬಳಸುವ ಪದಾರ್ಥಗಳ ಲೇಬಲಿಂಗ್ ಕಡ್ಡಯಾಗಿ ಪ್ರದರ್ಶನ ಮಾಡಬೇಕು.
13 ಆಹಾರ ಸುರಕ್ಷತಾ ಅಧಿಕಾರಿಗಳು ಬಂದಾಗ ತಪಾಸಣೆಗೆ ಸಹಕಾರ ನೀಡಬೇಕು
14 ಹೋಟೆಲ್ ಮಾಲೀಕರು ಎಲ್ಲ ಅಗತ್ಯ ದಾಖಲೆಗಳನ್ನ ಸರಿಯಾಗಿ ನಿರ್ವಹಣೆ ಮಾಡಬೇಕು
15 ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿವೇಳೆ ಲೋಪದೋಷಗಳು ಕಂಡುಬಂದರೆ ಲೋಪದೋಷ ಸರಿಪಡಿಸಿಕೊಳ್ಳಲ್ಲು 10 ದಿನ ಅವಕಾಶ.


