ಬೂದಿಗೆರೆ ಬಳಿ ಹಿಟ್ ಅಂಡ್ ರನ್ ಯುವತಿ ಸ್ಥಿತಿ ಗಂಭೀರ!
ಅಪಘಾತLATEST NEWSಬೆಂಗಳೂರು ಗ್ರಾಮಾಂತರ
S3 Media House
9/11/20261 min read


ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಬೂದಿಗೆರೆ ಗ್ರಾಮದ ಹೊರವಲಯದ ಬಾಗಲೂರು ರಸ್ತೆಯ ದರ್ಗಾ ಬಳಿ ಕಾರು ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ಬೈಕ್ ಗಳಿಗೆ ಡಿಕ್ಕಿ ಹೊಡೆದು ಕಾರಿನೊಂದಿಗೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೈಕ್ ಸವಾರರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಚಲಿಸುತ್ತಿದ್ದ ಕಟ್ಟಿಗೇನಹಳ್ಳಿ ನಿವಾಸಿ ಅರ್ಚಿತಾ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆ್ಯಂಬುಲೆನ್ಸ್ ನಲ್ಲಿ ದೇವನಹಳ್ಳಿಗೆ ರವಾನಿಸಲಾಗಿದೆ.
ಇನ್ನು ಕಾರು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಜ್ಜು ಗುಜ್ಜಾಗಿದ್ದು, ಕಾರನ್ನು ನಿಲ್ಲಿಸಲು ಸ್ಥಳೀಯರು ಮುಂದಾಗಿದ್ದಾರೆ. ಈ ವೇಳೆ ಕಾರಿನ ಚಾಲಕ ಜನರ ಮೇಲೆಯೇ ಕಾರನ್ನು ಹತ್ತಿಸಲು ಮುಂದಾಗಿದ್ದನಂತೆ. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಠಿ ನೀಡಿ ಪರಿಶೀಲನೆ ಮುಂದುವರೆಸಿದ್ದಾರೆ.



