ಐಟಿ ಉದ್ಯೋಗಿಯ ಅಪರೂಪದ ಪ್ರೇಮ ವಿವಾಹ!
LATEST NEWSಬೆಂಗಳೂರು
S3 Media House
9/3/20261 min read


ಐಟಿ ಉದ್ಯೋಗಿಯ ಅಪರೂಪದ ಪ್ರೇಮ ವಿವಾಹವೊಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ನಗರದ ಹೊರವಲಯದ ಆನೇಕಲ್ ನಲ್ಲಿ ಈ ಮದುವೆ ನಡೆದಿದ್ದು, ಆನೇಕಲ್ ನ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರೇಮಿಗಳು ವಿವಾಹವಾಗಿದ್ದಾರೆ. ಪುರುಷೋತ್ತಮ್ ಮತ್ತು ನಾಗರತ್ನ ಪ್ರೇಮ ವಿವಾಹವಾದ ನವ ಜೋಡಿಗಳಾಗಿದ್ದಾರೆ.
ಅಂದಹಾಗೆ ನಾಗರತ್ನ ಎಂಬುವವರಿಗೆ ಈ ಹಿಂದೆಯೇ ವಿವಾಹವಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದರು. ಗಂಡ ಅಪಘಾತದಲ್ಲಿ ಮೃತಪಟ್ಟಿದ್ದನು. ತದನಂತರ ಪುರುಷೋತ್ತಮ್ ನ ಪರಿಚಯವಾಗಿದೆ. ಜೊತೆಗೆ ಇಬ್ಬರು ಕೆಲ ಕಾಲ ಲೀವ್ ಇನ್ ಟುಗೆದರ್ ರಿಲೇಷನ್ನಲ್ಲಿ ಸಹ ಇದ್ದರಂತೆ. ಆದರೆ ಇವರಿಬ್ಬರ ವಿವಾಹಕ್ಕೆ ವರ ಮನೆಯವರು ಒಪ್ಪಿರಲಿಲ್ಲ.
ಇದಾದ ಕೆಲ ದಿನಗಳಲ್ಲಿ ಪುರುಷೋತ್ತಮ್ ಸಹ ನಾಗರತ್ನ ರನ್ನು ವಿವಾಹವಾಗುವುದಿಲ್ಲ ಎಂದು ನಿರಾಕರಿಸತೊಡಗಿದ್ದಾನೆ. ಈ ವೇಳೆ ನಾಗರತ್ನ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ನಂತರ ಪ್ರಗತಿಪರ ಸಂಘಟನೆಯೊಂದರ ಪದಾಧಿಕಾರಿಗಳು ಮತ್ತು ಇಬ್ಬರ ಕಡೆಯ ವಕೀಲರುಗಳು ಪುರುಷೋತ್ತಮ್ ಮನವೊಲಿಸಿ ಮದುವೆ ಒಪ್ಪಿಸಿದ್ದಾರೆ. ಕಾರಣ ಇಬ್ಬರಿಗೂ ಆನೇಕಲ್ ಪಟ್ಟಣದ ಅಂಬೇಡ್ಕರ್ ಪುತಃಳಿ ಮುಂದೆ ಮದುವೆ ಮಾಡಿದ್ದಾರೆ. ಇನ್ನು ನವ ವದು ವರರಿಗೆ ಶಾಸಕ ಶಿವಣ್ಣ ಸಹ ಆಶೀರ್ವಾದ ಮಾಡಿದ್ದಾರೆ.


