ಅಣ್ಣನ ಮನೆಯಲ್ಲಿ ಅತ್ತಿಗೆ ಒಡವೆ ಕದ್ದ ಖತರ್ನಾಕ್ ಮೈದುನ!
LATEST NEWSಬೆಂಗಳೂರುಅಪರಾಧ
S3 Media House
8/25/20261 min read


ಅಣ್ಣನ ಮನೆಯಲ್ಲಿದ್ದುಕೊಂಡು ಅತ್ತಿಗೆ ಒಡವೆಯನ್ನು ಕದ್ದು ಪರಾರಿಯಾಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೇಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯಕ್ಕೆ ಚಿನ್ನ ಕದ್ದು ಪರಾರಿಯಾಗಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಅಂದಹಾಗೆ ಅಣ್ಣನ ಮನೆಯಲ್ಲಿದ್ದುಕೊಂಡು ಹೋಟೆಲ್ ಮ್ಯಾನೆಜ್ಮೆಂಟ್ ಮಾಡಿ ಬ್ಯುಸಿನೆಸ್ ಮಾಡುತ್ತಿದ್ದ ವಿನಯ್ ಕುಮಾರ್ ಬಂಧಿತ ಖತರ್ನಾಕ್ ಆರೋಪಿಯಾಗಿದ್ದಾನೆ. ಬ್ಯುಸೆನೆಸ್ ಮಾಡಲು ದುಡ್ಡಿಲ್ಲದ ಕಾರಣ ಅತ್ತಿಗೆ ಒಡವೆ ಕದ್ದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಇನ್ನು ಅಣ್ಣ ಊರಿಗೆ ಹೋಗಿದ್ದಾಗ ಸ್ಕೇಚ್ ಹಾಕಿ ಅತ್ತಿಗೆಯ ಒಡೆವೆ ಎಗರಿಸಿದ್ದ ವಿನಯ್, ದೆಹಲಿಗೆ ಹೋಗಿ ಅತ್ತಿಗೆಯ ಒಡವೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದನು. ಈ ಬಗ್ಗೆ ಕೇಳಿದಾಗ ಬ್ಯುಸಿನೆಸ್ ಮಾಡಿ ಹಣ ವಾಪಸ್ಸ್ ಕೊಡುವುದಾಗಿ ತಿಳಿಸಿದ್ದನಂತೆ .
ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯ ಬಳಿ 10 ಲಕ್ಷ ಮೌಲ್ಯದ 75 ಗ್ರಾಂ ಚಿನ್ನಭರಣ ವಶಪಡಿಸಿಕೊಂಡಿದ್ದಾರೆ.


