KRS ಡ್ಯಾಂಗೆ ಹೆಚ್ಚಿದ ಒಳಹರಿವು; 22 ಸಾವಿರ ಕ್ಯೂಸೆಕ್ ದಾಟಿದ ನೀರಿನ ಹರಿವು
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (KRS) ಜಲಾಶಯಕ್ಕೆ ಮಳೆ ಹಿನ್ನೆಲೆ ಒಳಹರಿವು ಗಣನೀಯವಾಗಿ ಏರಿಕೆ.
ರಾಜ್ಯLATEST NEWS
S3 Media House
8/2/20261 min read


ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (KRS) ಜಲಾಶಯಕ್ಕೆ ಮಳೆ ಹಿನ್ನೆಲೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದ್ದು, ಭಾನುವಾರ 22,055 ಕ್ಯೂಸೆಕ್‌ಗೆ ತಲುಪಿದೆ. ಜಲಾಶಯದ ನೀರಿನ ಮಟ್ಟವೂ 96 ಅಡಿ ದಾಟಿ 96.90 ಅಡಿಗೆ ಏರಿಕೆಯಾಗಿದೆ.
KRS ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಗಳಾಗಿದ್ದು, ಪ್ರಸ್ತುತ ಜಲಾಶಯದಲ್ಲಿ 96.90 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿಯಾಗಿದ್ದು, ಸದ್ಯ 20.477 ಟಿಎಂಸಿ ನೀರು ಸಂಗ್ರಹವಾಗಿದೆ.
ಜಲಾಶಯಕ್ಕೆ 22,055 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 1,766 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಒಳಹರಿವು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
KRS ಡ್ಯಾಂನ ಇಂದಿನ ಅಂಕಿ-ಅಂಶಗಳು:
ಗರಿಷ್ಠ ನೀರಿನ ಮಟ್ಟ: 124.80 ಅಡಿ
ಪ್ರಸ್ತುತ ನೀರಿನ ಮಟ್ಟ: 96.90 ಅಡಿ
ಒಳಹರಿವು: 22,055 ಕ್ಯೂಸೆಕ್
ಹೊರಹರಿವು: 1,766 ಕ್ಯೂಸೆಕ್
ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
ಪ್ರಸ್ತುತ ನೀರಿನ ಸಂಗ್ರಹ: 20.477 ಟಿಎಂಸಿ


