ಒಂದೇ ಕುಟುಂಬದ 6 ಮಂದಿ ಕೆರೆಯಲ್ಲಿ ಶವವಾಗಿ ಪತ್ತೆ! ಕಾರಣ ಕೇಳಿದ್ರೆ ಶಾಕ್ ಆಗ್ತಿರ!

ಸಾವಿನ ಸುತ್ತ ಅನುಮಾನಗಳು ಹುತ್ತ!

ರಾಜ್ಯLATEST NEWSಅಪರಾಧ

S3 Media House

8/26/20261 min read

ಹೌದು, 4 ಮಂದಿ ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ವಿಜಯಪುರ ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ಶವಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಅಂದಹಾಗೆ ಮೃತರು ವಿಜಯಪುರ ತೊರವಿ ಗ್ರಾಮದ ನಿವಾಸಿಗಳಾಗಿದ್ದು, ಶೋಭಾ(45), ವಿದ್ಯಾ(16), ಸುವರ್ಣ(14), ಗೌಡೇಶ್(10), ವಿಕಾಸ(5) ಹಾಗೂ ಸಾನಿಕಾ(7) ಎಂದು ಗುರುತಿಸಲಾಗಿದೆ. ಮೃತರೆಲ್ಲ ಆಗಸ್ಟ್ 24 ರಂದು ಮನೆಯಿಂದ ಮಿಸ್ಸಿಂಗ್ ಆಗಿದ್ದರು ಎನ್ನಾಲಾಗಿದ್ದು, ಗಂಡನೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದರು ಎನ್ನಲಾಗಿದೆ. ಮನೆ ಬಿಟ್ಟು ಹೋಗುವಾಗ ಗಂಡ ಭೀಮರಾಯನಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು ಎಂದು ಮಾಹಿತಿ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.


ಸಾವಿನ ಸುತ್ತ ಅನುಮಾನದ ಹುತ್ತ!

6 ಮಂದಿ ಒಂದೇ ಬಾರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾತಗಳಿಗೆ ಕಾರಣವಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಪುಟ್ಟ ಕಂದಮ್ಮಗಳು ಸಹ ಇಲ್ಲಿ ಶವವಾಗಿದ್ದು ಎಲ್ಲರು ಕರುಳು ಚುರ್ ಅನ್ನುವಂತಾಗಿದೆ. ಗಂಡ ಹೆಂಡತಿ ಮಾಡುವ ತಪ್ಪಿಗೆ ಪುಟ್ಟ ಕಂದಮ್ಮಗಳು ಏನು ಪಾಪ ಮಾಡಿದವು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.