ಬೆಂಗಳೂರಿನಲ್ಲಿ ಹೊಸ ಕಾನೂನು ವಿವಿ ಸ್ಥಾಪನೆಗೆ ವಿರೋಧ!
ರಾಜ್ಯLATEST NEWS
S3 Media House
8/28/20261 min read


ರಾಜಧಾನಿ ಬೆಂಗಳೂರಿನಲ್ಲಿ ಪ್ರತ್ಯೇಕ ಕಾನೂನು ವಿಶ್ವವಿದ್ಯಾನಿಲಯ ಸ್ಥಾಪಿಸುವ ಸರ್ಕಾರದ ಪ್ರಸ್ತಾವನೆಯನ್ನು ಕೈಬಿಡುವಂತೆ ಶಾಸಕರ ಮನವಿ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವನ್ನೇ ಬಲಪಡಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಶಾಸಕರ ನಿಯೋಗದಿಂದ ಪತ್ರ ಬರೆಯಲಾಗಿದ್ದು, 2009ರ ಕಾಯ್ದೆ ಪ್ರಕಾರ ಹುಬ್ಬಳ್ಳಿ-ಧಾರವಾಡದಲ್ಲೇ ರಾಜ್ಯ ಮಟ್ಟದ ಕಾನೂನು ವಿವಿಯ ಪ್ರಧಾನ ಕಚೇರಿ ಇರಬೇಕು ಎಂದಿದ್ದಾರೆ.
ಬೆಂಗಳೂರಿನಲ್ಲಿ ಹೊಸ ವಿವಿ ಸ್ಥಾಪನೆ ಅಗತ್ಯವಿಲ್ಲವೆಂದು ಪ್ರತಿಪಾದನೆ ಮಾಡಿರುವ ಅವರು, ಉತ್ತರ ಕರ್ನಾಟಕದಲ್ಲಿ ವಿವಿ ಸ್ಥಾಪಿಸುವುದು ಪ್ರಾದೇಶಿಕ ಅಸಮತೋಲನ ನಿವಾರಣೆಯ ನಂಜುಂಡಪ್ಪ ಸಮಿತಿ ಶಿಫಾರಸುಗಳಿಗೆ ಬದ್ಧವಾಗಿದೆ. ಬೆಂಗಳೂರಿನಲ್ಲಿ ಹೊಸ ವಿವಿ ಸ್ಥಾಪಿಸುವುದರಿಂದ ಜಾಗ, ಕಟ್ಟಡ ಹಾಗೂ ಸಿಬ್ಬಂದಿಗಾಗಿ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ಹೊಸ ವಿವಿ ಬದಲಿಗೆ ಹುಬ್ಬಳ್ಳಿ-ಧಾರವಾಡದ ವಿವಿಯಲ್ಲೇ ಸೈಬರ್ ಲಾ, ಸಂವಿಧಾನಿಕ ಕಾನೂನು, ಆಸ್ತಿ ಹಕ್ಕು ಮುಂತಾದ ವಿಶೇಷ ವಿಭಾಗಗಳನ್ನು ಅಭಿವೃದ್ಧಿಪಡಿಸಲು ಒತ್ತಾಯಿಸಿದ್ದಾರೆ.
ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ್ ಬೆಲ್ಲದ್, ಸಿದ್ದು ಸವದಿ, ಡಾ. ಶೈಲೇಂದ್ರ ಬೆಲ್ದಾಳೆ, ಎಂ.ಆರ್. ಪಾಟೀಲ್, ಡಾ. ಅವಿನಾಶ್ ಜಾದವ್ ಸೇರಿದಂತೆ ಕೆಲ ಶಾಸಕರಿಂದ ಪತ್ರ ಬರೆಯಲಾಗಿದೆ.


