ಇಂದಿನಿಂದ ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವ.
ರಾಜ್ಯLATEST NEWSಧರ್ಮ & ಸಂಸ್ಕೃತಿ
S3 Media House
8/27/20261 min read


ಮಂತ್ರಾಲಯ: ಇಂದಿನಿಂದ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವ ನಡೆಯಲಿದ್ದು, ಮಹೋತ್ಸವಕ್ಕೆ ಟಿಟಿಡಿ ಯಿಂದ ಮುದ್ದಡ ರವಿಚಂದ್ರ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥ ಸ್ವಾಮಿಗೆ ಪವಿತ್ರ ವಸ್ತ್ರವನ್ನು ಸಮರ್ಪಿಸಿದರು. ಈ ವಸ್ತ್ರವನ್ನು ಸುಬುದೇಂದ್ರ ತೀರ್ಥರು ಮಂಗಳವಾದ್ಯಗಳೊಂದಿಗೆ ರಾಯರ ಮೂಲ ಬೃಂದಾವನಕ್ಕೆ ಅರ್ಪಿಸಿದರು.
ಇಂದು ಸಂಜೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಧ್ವಜಾರೋಹಣ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜೊತೆಗೆ ಗೋ, ಗಜ, ಅಶ್ವ, ಧಾನ್ಯ, ಲಕ್ಷ್ಮಿ ಪೂಜೆಯೂ ಸಹ ಇದೇ ವೇಳೆ ನೆರವೇರಲಿದೆ.
ಆರಾಧನಾ ಮಹೋತ್ಸವದಲ್ಲಿ ಆ.29ರಂದು ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ .31ರಂದು ಮಹಾರಥೋತ್ಸವ ನಡೆಯಲಿದ್ದು, ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಲಾಗುವುದು.


