ಅಧಿಕೃತವಾಗಿ ರಾಜೀನಾಮೆ ಘೋಷಣೆ ಮಾಡಿದ ಸಚಿವ ನಾಗೇಂದ್ರ!
LATEST NEWSರಾಜ್ಯರಾಜಕೀಯ
S3 Media House
8/28/20261 min read


ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸಚಿವ ನಾಗೇಂದ್ರ ರಾಜೀನಾಮೆ ಪ್ರಸಂಗ ಇಂದು ತಾರ್ಕಿಕ ಅಂತ್ಯಕ್ಕೆ ತಲುಪಿದೆ. ದೆಹಲಿಯಿಂದ ಆಗಮಿಸಿದ ಸಚಿವ ನಾಗೇಂದ್ರ ನೇರವಾಗಿ ಸಿಎಂ ಡಿಕೆಶಿಯನ್ನು ಭೇಟಿಯಾಗಿ ವಿಧಾನಸೌಧಕ್ಕೆ ಆಗಮಿಸಿದ್ದರು.
ನಂತರ ವಿಧಾನಸೌಧದಲ್ಲಿ ನಾಸೀರ್ ಹುಸೇನ್, ಜಿಸಿ ಚಂದ್ರಶೇಖರ್, ಸಚಿವರಾದ ಅಜೇಯ್ ಸಿಂಗ್, ರಿಜ್ವಾನ್ ಹರ್ಷದ್, ನಾರಾ ಭರತ್ ರೆಡ್ಡಿ ಜೊತೆಗೂಡಿ ಸಭೆ ನಡೆಸಿದರು. ತದನಂತರ ಪತ್ರಿಕಾಗೋಷ್ಢಿಯಗೆ ಆಗಮಿಸಿದ ನಾಗೇಂದ್ರ ತಮ್ಮ ಭಾಷನದುದ್ದಕ್ಕೂ ಬಿಜೆಪಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮನುವಾದಿಗಳೆಲ್ಲ ಸೇರಿ ದಲಿತ, ಆದಿವಾಸಿ ಸಮುದಾಯದವರನ್ನು ತುಳಿಯುತ್ತಿದ್ದಾರೆ. ನನ್ನಿಂದ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಒಂದೇ ಕಾರಣಕ್ಕೆ ಮತ್ತು ನಮ್ಮ ವರಿಷ್ಠರಿಗೆ ಮುಜುಗರವಾಗಬಾರದು ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಭಾವುಕರಾಗಿ ತಿಳಿಸಿದರು. ಸುದ್ದಿಗೋಷ್ಠಿಯುದ್ದಕ್ಕೂ ಗಳ ಗಳನೆ ಅಳುತ್ತಾ ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ನಾಗೇಂದ್ರ.


