ವಿಧಾನ ಪರಿಷತ್ ಸದಸ್ಯ ಕಿಡ್ನಾಪ್ : ಹಣಕ್ಕೆ ಬೇಡಿಕೆಯಿಟ್ಟು ಎಸ್ಕೇಪ್!

ಅತ್ತಿಬೆಲೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವ ಪೊಲೀಸರು.

ರಾಜಕೀಯಅಪರಾಧ

Sridhar M Budigere

6/2/20261 min read

ಮಾಜಿ ವಿಧಾನ ಪರಿಷತ್ ಸದಸ್ಯನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ಎಮ್​ ಎಲ್​ ಸಿ ದಯಾನಂದರೆಡ್ಡಿಯನ್ನು ಕಿಡ್ನಾಪ್​ ಮಾಡಿದ್ದ ಕಳ್ಳರು 3 ಕೋಟಿ ಹಣಕ್ಕೆ ಕೇಳಿದ್ದು, ತದನಂತರ 2 ಕೊಟಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ನಾಳೆ ಬೆಳಿಗ್ಗೆ 2 ಕೋಟಿ ಹಣ ನೀಡುವಂತೆ ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಅಂದಹಾಗೆ ತಡ ರಾತ್ರಿ 12.15 ರ ಸಮಯದಲ್ಲಿ ಮಾಜಿ ವಿಧಾನಪರಿಷತ್​ ಸದಸ್ಯ ದಯಾನಂದರೆಡ್ಡಿ ಗೋಲ್ಡ್​ ಕಾಯಿನ್​ ಕ್ಲಬ್​​ ನಿಂದ ಹೊರಡುವಾಗ ಹಿಲಲಿಗೆ ಬಳಿ ಇಬ್ಬರು ಬೈಕ್​ ಸವಾರರು ಕಾರನ್ನು ಅಡ್ಡಗಟ್ಟಿದ್ದಾರೆ. ನಿಮಗೆ ಗಿಫ್ಟ್​ ಬಂದಿದೆ ಎಂದು ಕಾಟನ್​ ಬಾಕ್ಸ್​ ತೋರಿಸಿದ್ದಾರೆ. ಕಾರ್​ ಡೋರ್​ ಲಾಕ್​ ತೆರೆಯುತ್ತಿದ್ದಂತೆ ಓರ್ವ ಕಾರಿನೊಳಗೆ ನುಗ್ಗಿದ್ದಾನೆ.

ಗನ್​ ತೋರಿಸಿ ತಾನು ಹೇಳಿದ ಮಾರ್ಗದಲ್ಲಿ ಕಾರು ಚಲಿಸುವಂತೆ ಸೂಚಿಸಿದ್ದಾನೆ. ಇದೇ ಸಮಯದಲ್ಲಿ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಕಾರನ್ನು ಹಿಂಬಾಲಿಸಿದ್ದಾರೆ. ಅತ್ತಿಬೆಲೆಯ ಯ ಕೆಎಚ್​ಬಿ ಬಡಾವಣೆ ಬಳಿ ಕರೆದುಕೊಂಡು ಹೋಗಿ ನಿನ್ನನ್ನು ಕೊಲ್ಲಲು 10 ಕೋಟಿ ಸುಫಾರಿ ಕೊಟ್ಟಿದ್ದಾರೆ ಎಂದು ಕುತ್ತಿಗೆ ಮೇಲೆ ಗನ್​ ಇಟ್ಟು ಬೆದರಿಸಿದ್ದಾರೆ.

ಈ ವೇಳೆ ನನ್ನನ್ನು ಕೊಲ್ಲಬೇಡಿ ಎಂದು ಬೇಡಿಕೊಂಡಿರುವ ಎಮ್​ಎಲ್​ಸಿ ಹಣ ನೀಡುವುದಾಗಿ ಹೇಳಿದ್ದಾರೆ. 3 ಕೋಟಿ ಹಣ ನೀಡಿದರೆ ನಿನ್ನನ್ನು ಬಿಟ್ಟು ಬಿಡುವುದಾಗಿ ಕಿಡ್ನಾಪರ್ಸ್​ ಹೇಳಿದ್ದಾರೆ. ಆದರೆ ದಯಾನಂದರೆಡ್ಡಿ 2 ಕೋಟಿ ಹಣ ನೀಡುವುದಾಗಿ ಹೇಳಿದ್ದಾರೆ. ಇದೀಗ ನನ್ನ ಬಳಿ ಹಣವಿಲ್ಲ ನಾಳೆ ಬೆಳಿಗ್ಗೆ ಬ್ಯಾಂಕ್​ ತೆರೆದಾಗ ಹಣ ನೀಡುವುದಾಗಿ ಮನವಿ ಮಾಡಿದ್ದಾರೆ. ಕಾರಣ ಕಿಡ್ನಾಪರ್ಸ್​ ಎಮ್​​ಎಲ್​ಸಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಈ ಸಂಬಂಧ ಅತ್ತಿಬೆಲೆ ಪೊಲೀಸ್​ ಠಾಣೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ದಯಾನಂದರೆಡ್ಡಿ ದೂರು ದಾಖಲು ಮಾಡಿದ್ದು, ಪೊಲೀಸರು ಖತರ್ನಾಕ್​ ಕಿಡ್ನಾಪರ್ಸ್​ಗಳಿಗಾಗಿ ಶೋಧ ನಡೆಸಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.