ಪಿಕ್ನಿಕ್ ಗೆ ಹೋಗಿದ್ದ ಗಂಗವಾರದ ತಾಯಿ ಮಗ ಸಾವು! ತಂದೆ ಮತ್ತು ಮಗಳು ಬಚಾವ್!
LATEST NEWSಅಪಘಾತ
S3 Media House
10/2/20261 min read


ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಗಂಗವಾರದಲ್ಲಿ ವಾಸ ಮಾಡುತ್ತಿದ್ದ ಕುಟುಂಬ ಇಂದು ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರಕ್ಕೆ ಪಿಕ್ನಿಕ್ ಗೆಂದು ತೆರಳಿದ್ದಾರೆ. ಗಾಂಧಿ ಜಯಂತಿ ದಿನದಂದು ರಜೆಯಿದ್ದ ಕಾರಣ ತಂದೆ ತಾಯಿ ಮಗಳು ಮಗ ಕುಟುಂಬ ಸಮೇತ ಹೋಗಿದ್ದಾರೆ.
ಈ ವೇಳೆ ಕುಟುಂಬ ಸಮೇತ ನೀರಿನಲ್ಲಿ ಆಟವಾಡಲು ಕೆರೆಗೆ ಇಳಿದಿದ್ದಾರೆ. ನೀರಿನಲ್ಲಿ ಆಯಾ ತಪ್ಪಿ ತಾಯಿ ರೇಖಾ ಮುಳುಗಿದ್ದಾರೆ. ಇದನ್ನು ಕಂಡ ಮಗ ಹೇಮಂತ್ ತಾಯಿಯನ್ನು ಕಾಪಾಡಲು ಮುಂದಾಗಿದ್ದಾನೆ. ಜೊತೆಗೆ ತಂದೆ ರಾಜು ಸಹ ನೀರಿಗೆ ಹಾರಿದ್ದಾನೆ. ಆದರೆ ತಾಯಿ ಮತ್ತು ಮಗ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆದರೆ ನೀರಿನಲ್ಲಿ ಮುಳುಗುತ್ತಿದ್ದ ತಂದೆ ರಾಜುವನ್ನು ಸ್ಥಳೀಯರು ಪಾರು ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ದೌಡಯಿಸಿದ್ದು, ಮೃತದೇಹಗಳ ಹುಡುಕಾಟ ನಡೆಸಿದ್ದಾರೆ.



