ಮಹಿಳೆಯರನ್ನು ಕರೆಸಿ SIR ಪತ್ರ ವಿತರಣೆ: ನೆಲಮಂಗಲದಲ್ಲಿ ವಿವಾದ!
ನೆಲಮಂಗಲ ಮಸೀದಿಯಲ್ಲಿ SIR ಪತ್ರ ವಿತರಣೆ: ಚರ್ಚೆಗೆ ಕಾರಣವಾದ ಕಾರ್ಯವೈಖರಿ
LATEST NEWS
7/4/20261 min read


ಮತದಾರರ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಬೂತ್ ಮಟ್ಟದ ಅಧಿಕಾರಿಗಳ ಕಾರ್ಯವೈಖರಿ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ನಿಯಮಾನುಸಾರ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಪರಿಶೀಲಿಸಿ ಅರ್ಜಿಗಳನ್ನು ವಿತರಿಸಬೇಕಿದೆ. ಆದರೆ ನೆಲಮಂಗಲ ನಗರದಲ್ಲಿ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಕುಳಿತು ಸಾರ್ವಜನಿಕರನ್ನು ಕರೆಸಿಕೊಂಡು ಪ್ರಕ್ರಿಯೆ ನಡೆಸಿರುವುದು ಗಮನಕ್ಕೆ ಬಂದಿದೆ.
ನೆಲಮಂಗಲದ ಮಸೀದಿಯೊಂದರಲ್ಲಿ ಸಾರ್ವಜನಿಕರನ್ನು, ಅದರಲ್ಲೂ ಮಹಿಳೆಯರನ್ನು ಕರೆಸಿಕೊಂಡು ಅವರ ಮಾಹಿತಿಯನ್ನು ಪಡೆದು ಎಸ್‌ಐಆರ್ ಪತ್ರಗಳನ್ನು ವಿತರಿಸಿರುವ ದೃಶ್ಯಗಳು ಇದೀಗ ಚರ್ಚೆಗೆ ಕಾರಣವಾಗಿವೆ.
ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕಿದ್ದ ಪ್ರಕ್ರಿಯೆಯನ್ನು ಒಂದೇ ಸ್ಥಳದಲ್ಲಿ ನಡೆಸಿರುವ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಕೇಳಿಬರುತ್ತಿವೆ. ಈ ಕಾರ್ಯವೈಖರಿ ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾಗಿದೆಯೇ ಎಂಬ ಚರ್ಚೆಯೂ ಆರಂಭವಾಗಿದೆ.


