ದೇವಾಲಯಕ್ಕೆ 3 ಎಕರೆ ಜಮೀನು 50 ಲಕ್ಷ ದೇಣಿಗೆ!

ನ್ಯೂ ಬಾಲ್ಡ್ ವಿನ್ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಅದ್ಧೂರಿ ಗೌರಿ ಜಾತ್ರಾ ಮಹೋತ್ಸವ.

LATEST NEWSಧರ್ಮ & ಸಂಸ್ಕೃತಿ

S3 Media House

10/6/20261 min read

ಗುಮ್ಮಳಾಪುರದ ಗೌರಿ ದೇವಾಲಯ ಸಾಕಷ್ಟು ಪುರಾತನ ದೇವಾಲಯವಾಗಿದ್ದು, ದೇವಾಲಯಕ್ಕೆ ಕೃತ ಯುಗದ ಚರಿತ್ರೆಯ ನಂಟಿದೆ. ಇಲ್ಲಿ ಸಾಕ್ಷತ್ ಗೌರಿ ನೆಲೆಸಿದ್ದಾರೆ ಎಂದು ನ್ಯೂ ಬಾಲ್ಡ್ವಿನ್ ಶಾಲೆಯ ಚೇರ್ಮನ್ ಡಾ.ಟಿ.ವೇಣುಗೋಪಾಲ್ ಹೇಳಿದರು.

ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿರುವ ಗುಮ್ಮಳಾಪುರದಲ್ಲಿ ನಡೆಯುವ ಗೌರಿ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃತ ಯುಗದ ಕಾಲದ್ದೆಂದು ಪ್ರತೀತಿ ಹೊಂದಿರುವ ಮತ್ತು ಗೌರಮ್ಮ ದೇವಿಯ ತವರು ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿರುವ ಗುಮ್ಮಳಾಪುರದ ಗೌರಿ ದೇವಿ ಕ್ಷೇತ್ರ ಭೂ ಕೈಲಾಸವೆಂದೇ ಹೆಸರುವಾಸಿ. ಮೈಸೂರು ಮಹಾರಾಜರ ಕಾಲದಲ್ಲಿ ಗುಮ್ಮಳಾಪುರ ಎಂದು ಹೆಸರಿಡಲಾಗಿದೆ ಎಂದರು.

ದೇವಾಲಯಕ್ಕೆ 3 ಎಕರೆ ಜಮೀನು 50 ಲಕ್ಷ ದೇಣಿಗೆ!

ಇನ್ನು ನ್ಯೂ ಬಾಲ್ಡ್ ವಿನ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ದೇವಾಲಯಕ್ಕೆ 3 ಎಕರೆ ಜಮೀನು ಮತ್ತು ದೇವಾಲಯದಲ್ಲಿ ಜೀರ್ಣೋದ್ಧಾರಕ್ಕೆ 50 ಲಕ್ಷ ರೂ ದೇಣಿಗೆಯನ್ನು ಚೆರ್ಮನ್ ಡಾ.ಟಿ.ವೇಣುಗೋಪಾಲ್ ಹಾಗೂ ಸಂಸ್ಥಾಪಕರಾದ ಸೌಭಗ್ಯವತಿ ವೇಣುಗೋಪಾಲ್ ನೀಡಿದ್ದಾರೆ. ಈ ಬಾರಿಯ ಜಾತ್ರೆ ಮಹೋತ್ಸವವು ಅಕ್ಟೋಬರ್ 2ರಿಂದ ಆರಂಭಗೊಂಡಿದ್ದು 15 ರ ವರೆಗೆ ನಡೆಯಲಿದೆ. ಇದೇ ಗ್ರಾಮದ ಕೆರೆಯ ಮಣ್ಣಿನಿಂದ ತಯಾರು ಮಾಡಲಾದ ಗೌರಿ ಮೂರ್ತಿಯನ್ನು ಕೊನೆಯ ದಿನ ವಿಸರ್ಜಿಸಿ ಜಲವಾಸ ಮಾಡಲಾಗುವುದು.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.