ಬೆಂಗಳೂರಿನ ಪಿಜಿಯಲ್ಲಿ ಇರೋರೆ ಹುಷಾರ್! ಯಾಕಂತ ಹೇಳ್ತೀವಿ ಈ ಸ್ಟೋರಿ ನೋಡಿ!
LATEST NEWSಅಪರಾಧಬೆಂಗಳೂರು
S3 Media House
9/17/20261 min read


ನಾವು ಪಿಜಿ ಯಲ್ಲಿ ವಾಸ ಮಾಡುತ್ತಿದ್ದೇವೆ. ನಮ್ಮ ಸುತ್ತಮುತ್ತಲು ಸಿಸಿ ಕ್ಯಾಮರಾಗಳಿವೆ. ಪಿಜಿ ಯೊಳಗಡೆ ಎಲ್ಲರು ಪ್ರವೇಶ ಮಾಡಲು ಬಿಡುವುದಿಲ್ಲ. ಪಿಜಿಗೆ ಸೆಕ್ಯೂರಿಟಿ ಸಹ ಇದೆ ಎಂದ ಮೈಮರೆತು ಡೋರ್ ಕ್ಲೋಸ್ ಮಾಡದೆ ಮಲಗಿದ್ರೆ ನೀವು ಕಳ್ಳರ ಕಣ್ಣಿಗೆ ಬಿದ್ದಿದ್ದೀರಿ ಅನ್ನೋದು ಗ್ಯಾರೆಂಟಿ.
ಇದೇ ರೀತಿ ಪಿಜಿಯಲ್ಲಿ ಮೈಮರೆತು ಸರಿಯಾಗಿ ಡೋರ್ ಹಾಕದೆ ಇದ್ದಂತಹ ಕೆಲವರು ಇದೀಗ ತಮ್ಮ ವಸ್ತುಗಳನ್ನು ಕಳೆದುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ. ಹೌದು ಬೆಂಗಳೂರು ನಗರದ ಪೀಣ್ಯ ದಾಸರಹಳ್ಳಿ ಸುಕನ್ಯಾ ಜೆಟ್ಸ್ ಪಿಜಿಯಲ್ಲಿ ಈ ರೀತಿಯ ಘಟನೆ ನಡೆದಿದೆ. ಇಲ್ಲಿ ವಾಸವಿದ್ದ ಆದರ್ಶ ಎಂಬುವವರ ಮೊಬೈಲ್ ಮತ್ತು ಲ್ಯಾಪ್ ಟಾಪ್ ನ್ನು ಕದೀಮರು ಎಗರಿಸಿದ್ದಾರೆ.
ಇದರೊಂದಿಗೆ ಪಿಜಿಯಲ್ಲಿ ನಾಲ್ಕು ಮೊಬೈಲ್ಗಳನ್ನು ಸಹ ಎಗರಿಸಿದ್ದಾರೆ. ಈ ಸಂಬಂಧ ಆದರ್ಶ್ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



