ಕಳ್ಳಬಟ್ಟಿ ಸರಾಯಿ ಜಾಲಕ್ಕೆ ಬಿಗ್ ಶಾಕ್: 10 ತಂಡಗಳಿಂದ ಏಕಕಾಲದ ದಾಳಿ!
ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಭರ್ಜರಿ ಕಾರ್ಯಾಚರಣೆ.
LATEST NEWSಅಪರಾಧ
S3 Media House
6/11/20261 min read


ವಿಜಯಪುರ ನಗರದಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆದಿದೆ. ಕಳ್ಳಬಟ್ಟಿ ಸರಾಯಿ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಹರಣಶಿಕಾರಿ ಕಾಲೋನಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, 10 ಪೊಲೀಸ್ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿ ಕಳ್ಳಬಟ್ಟಿ ಸರಾಯಿ ಹಾಗೂ ನಕಲಿ ಸೇಂದಿ ತಯಾರಿಕೆ ಜಾಲವನ್ನು ಬಯಲಿಗೆಳೆದಿವೆ.
ದಾಳಿಯ ವೇಳೆ ಸುಮಾರು 480 ರಿಂದ 500 ಲೀಟರ್ ಕಚ್ಚಾ ಕೊಳೆ, 50 ಲೀಟರ್ ನಕಲಿ ಸೇಂದಿಯನ್ನು ನಾಶಪಡಿಸಲಾಗಿದೆ. 30 ಲೀಟರ್ ಶುದ್ಧ ಕಳ್ಳಬಟ್ಟಿ ಸರಾಯಿ ಹಾಗೂ 1 ಕೆಜಿ ಸಿಎಚ್ ಪೌಡರ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಈ ಸಂಬಂಧ ಗೋಲಗುಮ್ಮಜ್ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಜಪ್ತಿ ಹಾಗೂ ನಾಶಪಡಿಸಿದ ವಸ್ತುಗಳ ಒಟ್ಟು ಮೌಲ್ಯ ಸುಮಾರು 45 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಈ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ.


