ಪಿಓಪಿ ಗಣೇಶ ಮೂರ್ತಿ ತಯಾರಿಕ ಘಟಕಗಳ ಮೇಲೆ ಬೃಹತ್ ದಾಳಿ! ದಾಳಿ ವೇಳೆ ಸುಮಾರು 1000 ಗಣೇಶ ಮೂರ್ತಿಗಳು ವಶಕ್ಕೆ!
14 ಗೋಡೌನ್ ಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಸುಮಾರು 1000 ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದು ಇದ್ರಲ್ಲಿ ನೀವು ಬುಕ್ ಮಾಡಿರುವ ಗಣೇಶ ಮೂರ್ತಿ ಸಹ ಇರಬಹುದು ಚೆಕ್ ಮಾಡಿಕೊಳ್ಳಿ!
LATEST NEWSಬೆಂಗಳೂರುಅಪರಾಧ
S3 Media House
9/3/20261 min read


ನ್ಯಾಯಾಲಯಗಳು ಸೇರಿದಂತೆ ರಾಜ್ಯ ಸರಕಾರವೂ ಸಹ ಪರಿಸರಕ್ಕೆ ಹಾನಿಯಾಗುವಂತೆ ಪಿಓಪಿ ಬಳಸಿ ಗಣೇಶ ಮೂರ್ತಿಗಳನ್ನು ತಯಾರು ಮಾಡಬಾರದು ಹಾಗೂ ಇಂತಹ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಸಹ ಮಾಡಬಾರದು ಎಂದು ಸಾಕಷ್ಟು ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ರಾಜ್ಯದ ಹಲವೆಡೆ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ನಡೆಯುತ್ತಲೇ ಇದೆ. ಇನ್ನು ಯುವಕರು ಸಹ ಇಂತಹ ಪಿಓಪಿ ಗಣೇಶ ಮೂರ್ತಿಗಳನ್ನು ಕೊಳ್ಳುತ್ತಲೇ ಇದ್ದಾರೆ.
ಇದರಿಂದ ಎಚ್ಚೆತ್ತುಕೊಂಡಿರುವ ಪರಿಸರ ಮಾಲಿನ್ಯ ಇಲಾಖೆ ಪಿಓಪಿ ಗಣೇಶ ಮೂರ್ತಿ ತಯಾರಿಕ ಕೇಂದ್ರಗಳು ಹಾಗೂ ಗೋಡೌನ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದ ಹೊರವಲಯದಲ್ಲಿನ ಮಾರಸಂದ್ರ ಬಳಿಯಿರುವ ಗೋಡೌನ್ ಗಳು ಮತ್ತು ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ.
ರಾಜನುಕುಂಟೆ ಹಾಗೂ ಮಾರಸಂದ್ರ ಬಳಿಯ 14 ಗೋಡೌನ್ ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು ಒಂದು ಸಾವಿರ ಪಿಓಪಿ ಗಣೇಶ ಮೂರ್ತಿಗಳನ್ನು ಸೀಜ್ ಮಾಡಿದ್ದಾರೆ. ತಹಸೀಲ್ದಾರ್ ಮತ್ತು ಪಿಡಿಓ , ಪೊಲೀಸರೊಂದಿಗೆ ಈ ದಾಳಿ ನಡೆಸಿದ್ದಾರೆ.
ಗಣೇಶ ಚತುರ್ಥಿ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ದಾಳಿ ನಡೆದಿದ್ದು, ಇದಾಗಲೇ ಬುಕ್ಕಿಂಗ್ ಮಾಡಿರುವಂತಹವರು ಸಪ್ಪೆ ಮೊರೆ ಹಾಕಿಕೊಳ್ಳುವಂತಾಗಿದೆ.



