ಆತ್ಯಾಚಾರಿ ಪ್ರಜ್ವಲ್ ರೇವಣ್ಣನ ಮೊಬೈಲ್ ಸೀಕ್ರೇಟ್ ಬಯಲು!
ಜೈಲಿನಲ್ಲಿದ್ದಗಲೂ ಪ್ರಜ್ವಲ್ ರೇವಣ್ಣನ ಮೊಬೈಲ್ ನಲ್ಲಿ ಏನೇನಿತ್ತು ಗೊತ್ತಾ?
LATEST NEWSಬೆಂಗಳೂರುಅಪರಾಧರಾಜಕೀಯ
S3 Media House
9/11/20261 min read


ಜೈಲಲ್ಲಿ ಮೊಬೈಲ್ ಬಳಸಿ ಬಿಂದಾಸ್ ಜೀವನ ನಡೆಸುತ್ತಿದ್ದ ಪ್ರಜ್ವಲ್ ರೇವಣ್ಣನ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ದೊರಕಿದೆ. ಪ್ರಜ್ವಲ್ ಕೈಗೆ ಮೊಬೈಲ್ ಹೇಗೆ ಸಿಕ್ಕಿತು. ಯಾರು ಮೊಬೈಲ್ ತಂದು ಕೊಟ್ಟರು, ಇದರಲ್ಲಿ ಜೈಲಿನ ಅಧಿಕಾರಿಗಳ ಪಾತ್ರವೇನು? ಎಷ್ಟು ಜನ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಸಂಪೂರ್ಣ ಮಾಹಿತಿ ಇದೀಗ ಬಯಲಾಗಿದೆ.
ಅಂದಹಾಗೆ ಜೈಲಿನಲ್ಲಿ ಪ್ರಜ್ವಲ್ ಕೈಗೆ ಮೊಬೈಲ್ ದೊರೆಯಲು ಪ್ರಮುಖ ಪಾತ್ರ ವಹಿಸಿದ್ದದ್ದು ಡಿಜೆ ಹಳ್ಳಿ ಗಲಭೆಕೋರ ತೌಸಿಫ್ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಜೊತೆಗೆ ಈ ಗಲಭೆ ಕೋರನಿಗೆ ಜೈಲು ವಾರ್ಡನ್ ಪ್ರಕಾಶ್ ಗಾವ್ಡೇ ಸಹ ಸಹಕಾರ ನೀಡಿದ್ದನು ಎನ್ನಲಾಗಿದೆ. ಇನ್ನು ಇದಾಗಲೇ ಪ್ರಕಾಶ್ ಗಾವ್ಡೇಯನ್ನು ಈ ಸಂಬಂಧ ಬಂಧಿಸಲಾಗಿದೆ.
ಅಕ್ರಮವಾಗಿ ಮೊಬೈಲ್ ಬಳಕೆ ಪ್ರಕರಣದಲ್ಲಿ ಇದಾಗಲೇ ಪರಪ್ಪನ ಅಗ್ರಹಾರ ಜೈಲು ವಾರ್ಡನ್ ಪ್ರಕಾಶ್ ಗಾವ್ಡೇ ಹಾಗೂ ಡಿಜೆ ಹಳ್ಳಿ ಗಲಭೆಕೋರ ತೌಸಿಫ್ ಸೇರಿ 7 ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಮೊಬೈಲ್ ನಲ್ಲಿ ಏನಿತ್ತು? ಸಿಮ್ ಎಲ್ಲಿಂದ ಬಂತು?
ಜೈಲಿನಲ್ಲಿ ಅಕ್ರಮವಾಗಿ ಬಳಸುತ್ತಿದ್ದ ಮೊಬೈಲ್ ನನ್ನು ವಶಪಡಿಸಿಕೊಂಡ ಪೊಲೀಸರಿಗೆ ಮೊಬೈಲ್ ನಲ್ಲಿದ್ದದ್ದನ್ನು ಕಂಡು ಶಾಕ್ ಆಗಿದ್ದಾರೆ. ಪ್ರಜ್ವಲ್ ರೇವಣ್ಣನ 2 ಅಶ್ಲಿಲ ವಿಡಿಯೋಗಳಲು ಸೇರಿ 173 ಅಶ್ಲಿಲ ವಿಡಿಯೋಗಳು ಮೊಬೈಲ್ ನಲ್ಲಿದ್ದವಂತೆ. ತನ್ನ ಅಶ್ಲಿಲ ವಿಡಿಯೋ ನೋಡಿ ತಾನೇ ಎಂಜಾಯ್ ಮಾಡುತ್ತಿದ್ದನಂತೆ.ಜೊತೆಗೆ ಜೈಲಿನಿಂದಲೇ ಹಲವು ಹುಡುಗಿಯರಿಗೆ ಕಾಲ್ ಮಾಡಿ ಮಾತನಾಡುತ್ತಿದ್ದ ಎಂಬ ಅಂಶ ಸಹ ಇದೀಗ ಬಯಲಾಗಿದೆ.
ಇನ್ನು ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಸಿಮ್ ನೆರೆಯ ರಾಜ್ಯ ಆಂಧ್ರಪ್ರದೇಶದ ಪುಂಗನೂರಿನಿಂದ ತರಲಾಗಿತ್ತು ಎಂಬ ಸಂಗತಿ ಸಹ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಒಟ್ಟಾರೆ ರೇಪ್ ಕೇಸ್ ನಲ್ಲಿ ಜೈಲು ಸೇರಿ ಮುದ್ದೆ ಮುರಿಯುತ್ತಿರುವ ಆತ್ಯಾಚಾರಿ ಪ್ರಜ್ವಲ್ ರೇವಣ್ಣನಿಗೆ ಇನ್ನು ಸಹ ಬುದ್ದಿ ಬಂದಂತೆ ಕಾಣುತ್ತಿಲ್ಲ. ಜೈಲಿನಲ್ಲಿದ್ದುಕೊಂಡೇ ಹತ್ತು ಹಲವು ಅಕ್ರಮಗಳು ನಡೆಸಲು ಮುಂದಾಗಿರುವುದು ನಿಜಕ್ಕೂ ಪ್ರಜ್ವಲ್ ರೇವಣ್ಣನ ಕ್ರೂರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.


