ಕೈದಿಯ ಜೊತೆ ಸರಸಸಲ್ಲಾಪ! ಸಬ್ ಇನ್ಸಪೆಕ್ಟರ್ ಸಸ್ಪೆಂಡ್!

LATEST NEWSಅಪರಾಧ

S3 Media House

9/2/20261 min read

ಜೈಲಿನಲ್ಲಿದ್ದ ಕೈದಿಯ ಜೊತೆ ಸರಸಸಲ್ಲಾಪ ನಡಸಿದ್ದ ಮಹಿಳಾ ಪಿಎಸ್ಐ ನನ್ನು ಸಸ್ಪೆಂಡ್ ಮಾಡಿ ಆಂತರಿಕ ಭದ್ರತಾ ವಿಭಾಗದ ಐಜಿಪಿ ಆದೇಶ ಹೊರಡಿಸಿದ್ದಾರೆ. KSISF ಸಬ್ ಇನ್ಸ್ ಪೆಕ್ಟರ್ ಜಯಶ್ರೀ ಯನ್ನುಸಸ್ಪೆಂಡ್ ಮಾಡಲಾಗಿದೆ.

ಬೆಳಗಾವಿಯ ಜೈಲಿನಲ್ಲಿ ಸಾಯಿಕುಮಾರ್ ಎಂಬ ಕೈದಿಯ ಜೊತೆ ಎಸ್ಐ ಜಯಶ್ರೀ ಸರಸಸಲ್ಲಾಪ ನಡೆಸಿದ್ದರು ಎನ್ನಲಾಗಿತ್ತು. ಜೊತೆಗೆ ಕೈದಿಯ ಬ್ಯಾಂಕ್ ಖಾತೆಯಿಂದ ಸಹ ಎಸ್ಐ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಳಂತೆ. ಮಾತ್ರವಲ್ಲ ಕೈದಿಯನ್ನು ಎನ್​ಕೌಂಟರ್ ಸಹ ಮಾಡಿಸುವುದಾಗಿ ಜಯಶ್ರೀ ಸಂಭಾಷಣೆ ನಡೆಸಿರುವುದು ಸಹ ತನಿಖೆಯಲ್ಲಿ ಬಯಲಾಗಿದೆ.

ಈ ಎಲ್ಲಾ ವಿಚಾರಗಳು ಬಯಲಾಗುತ್ತಿದ್ದಂತೆ ಇಲಾಖಾ ತನಿಖೆ ನಡೆಸಲಾಗಿದೆ. ತನಿಖೆಯಲ್ಲಿ ಜಯಶ್ರೀಯ ಅಸಲಿ ರೂಪ ಬಯಲಾಗಿದ್ದು, ಕೂಡಲೇ ಆಂತರಿಕೆ ಭದ್ರತಾ ವಿಭಾಗದ ಐಜಿಪಿ ಸಬ್ ಇನ್ಸಪೆಕ್ಟರ್ ನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.