ಅಶ್ಲೀಲ ಮಾರ್ಫಿಂಗ್ ವಿರುದ್ಧ ಪ್ರಕರಣ ದಾಖಲಿಸಿದ ನಟಿ ರುಕ್ಮಿಣಿ ವಸಂತ್!
ಯಾವ್ಯಾವ ಸೋಶಿಯಲ್ ಮಿಡಿಯಾ ಅಕೌಂಟ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಸಾರಾಂಶದ ಸಂಪೂರ್ಣ ವಿವಿರ ಇಲ್ಲಿದೆ ಓದಿ!
ಸಿನಿಮಾಅಪರಾಧ
Sridhar M Budigere
6/2/20261 min read


ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿ ರುಕ್ಮಿಣಿ ವಸಂತ್ ಅವರಿಗೆ ಡೀಪ್‌ಫೇಕ್ ಕಂಟಕ ಎದುರಾಗಿದೆ! ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ನಟಿಯ ಫೋಟೋಗಳನ್ನು ದುಷ್ಕರ್ಮಿಗಳು ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್ ಮಾಡಿದ್ದಾರೆ. ಈ ಸೈಬರ್ ದೌರ್ಜನ್ಯದ ವಿರುದ್ಧ ನಟಿ ರುಕ್ಮಿಣಿ ವಸಂತ್ ಈಗ ಕೆರಳಿ ಕೆಂಡವಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಅವರು, ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ
ತಂತ್ರಜ್ಞಾನ ಬೆಳೆದಂತೆಲ್ಲಾ ಮಹಿಳೆಯರ, ಅದರಲ್ಲೂ ಪ್ರಮುಖವಾಗಿ ಚಿತ್ರರಂಗದ ನಟಿಯರ ಸುರಕ್ಷತೆ ಪ್ರಶ್ನಾರ್ಥಕ ಚಿಹ್ನೆಯಾಗುತ್ತಿದೆ. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ, ಆಲಿಯಾ ಭಟ್ ಅವರ ಫೋಟೋಗಳು ಡೀಪ್‌ಫೇಕ್ ಆಗಿದ್ದವು. ಈಗ ಆ ಸಾಲಿಗೆ ನಮ್ಮ ಕನ್ನಡದ ನಟಿ ರುಕ್ಮಿಣಿ ವಸಂತ್ ಕೂಡ ಸೇರಿದ್ದಾರೆ. ಕಿಡಿಗೇಡಿಗಳು ಅವರ ಫೋಟೋಗಳನ್ನು ಎಐ (AI) ತಂತ್ರಜ್ಞಾನ ಬಳಸಿ ವಿಕೃತವಾಗಿ ಎಡಿಟ್ ಮಾಡಿದ್ದಾರೆ. ಈ ಡಿಜಿಟಲ್ ದೌರ್ಜನ್ಯವನ್ನು ಮೂಕಪ್ರೇಕ್ಷಕರಾಗಿ ಸಹಿಸದ ರುಕ್ಮಿಣಿ, ಧೈರ್ಯವಾಗಿ ಮುಂದೆ ಬಂದು ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರ ಮೆಟ್ಟಿಲೇರಿದ್ದಾರೆ.ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿ ರುಕ್ಮಿಣಿ ವಸಂತ್ ಅವರಿಗೆ ಡೀಪ್‌ಫೇಕ್ ಕಂಟಕ ಎದುರಾಗಿದೆ! ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ನಟಿಯ ಫೋಟೋಗಳನ್ನು ದುಷ್ಕರ್ಮಿಗಳು ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್ ಮಾಡಿದ್ದಾರೆ. ಈ ಸೈಬರ್ ದೌರ್ಜನ್ಯದ ವಿರುದ್ಧ ನಟಿ ರುಕ್ಮಿಣಿ ವಸಂತ್ ಈಗ ಕೆರಳಿ ಕೆಂಡವಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಅವರು, ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ


ರುಕ್ಮಿಣಿ ವಸಂತ್ ನೀಡಿದ ದೂರಿನನ್ವಯ ಪೊಲೀಸರು ಒಟ್ಟು 29 ಸೋಶಿಯಲ್ ಮೀಡಿಯಾ ಅಕೌಂಟ್ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದರಲ್ಲಿ 9 ಇನ್ಸ್ಟಾಗ್ರಾಮ್ ಅಕೌಂಟ್ಗಳು, 14 ಟ್ವಿಟರ್ ಅಕೌಂಟ್ಗಳು ಹಾಗೂ 6 ಫೇಸ್ಬುಕ್ ಪೇಜ್ಗಳು ಸೇರಿವೆ. ಸೈಬರ್ ಪೊಲೀಸರು ಐಟಿ ಆ್ಯಕ್ಟ್ 66C, 66D ಹಾಗೂ ಬಿಎನ್ಎಸ್ (BNS) ಸೆಕ್ಷನ್ 75(3), 79, 336, 356, 351, 352 ಮತ್ತು 294ರ ಅಡಿಯಲ್ಲಿ ಮೊಕದ್ದಮೆ ಹೂಡಿ ತನಿಖೆ ಆರಂಭಿಸಿದ್ದಾರೆ.
ಒಟ್ಟಿನ್ನಲ್ಲಿ ಈ ಹಿಂದೆ ಸ್ಯಾಂಡಲ್ವುಡ್ ಹಿರಿಯ ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ಗಳು ಬಂದಿದ್ದವು. ಇದರ ವಿರುದ್ಧ ದೂರು ದಾಖಲು ಮಾಡಲಾಗಿತ್ತು. ಆಗ ಅನೇಕರ ಬಂಧನ ಆಗಿತ್ತು. ಈಗ ನಟಿ ರುಕ್ಮಿಣಿ ವಸಂತ್ ಪ್ರಕಿರಣದಲ್ಲೂ ಹಲವರನ್ನು ಅರೆಸ್ಟ್ ಮಾಡುವ ಸಾಧ್ಯತೆ ಇದೆ.


