ಶಿವರಾಮ ಕಾರಂತ ಬಡಾವಣೆ : ರೈತರಿಗೆ ತಪ್ಪದ ಬವಣೆ
ಶಿವರಾಮ ಕಾರಂತ ಬಡಾವಣೆ ಸೈಟ್ ಹಂಚಿಕೆ ವಿಚಾರ ಪ್ರತಿಭಟನೆ ಹಾದಿ ಹಿಡಿದ ರೈತರು!
ಸಾರ್ವಜನಿಕ ಸಮಸ್ಯೆಗಳುLATEST NEWSಬೆಂಗಳೂರು
S3 Media House
8/25/20261 min read


ಹಲವು ವರ್ಷಗಳಿಂದ ಸದ್ದು ಮಾಡುತ್ತಿದ್ದ ಶಿವರಾಮ ಕಾರಂತ ಬಡಾವಣೆ ಸೈಟ್ ಹಂಚಿಕೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಸೈಟ್ ಹಂಚಿಕೆಯಲ್ಲಿ ಬಿಡಿಎ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ರೈತರು ಜಿಬಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.
2008 ರಲ್ಲಿ ನೋಟಿಫಿಕೇಷನ್ ಆಗಿದ್ದ ಬಿಡಿಎ ಅಕ್ವಿಜೇಶನ್ ಮಾಡಿದ್ದ ಸರಕಾರ ರಾಮಗೊಂಡನಹಳ್ಳಿ, ವೀರಸಾಗರ, ಕೆಂಪನಹಳ್ಳಿ ಸೇರಿದಂತೆ 17 ಗ್ರಾಮಗಳ 2500 ಎಕರೆ ಗೆ ನೋಟಿಫಿಕೇಟಿನ್ ಮಾಡಿದ್ದು ಹಗ್ಗ ಜಗ್ಗಾಟದಲ್ಲೇ ಮುಂದುವರೆದಿದ್ದು, ಫೈನಲ್ ಆಗಿ ಆಗಸ್ಟ್ 31 ರ ನಂತರ ಸೈಟ್ ಹಂಚಿಕೆಗೆ ಬಿಡಿಎ ಮುಂದಾಗಿದೆ. ಒಂದೆಡೆ ಸುಪ್ರೀಂ ಕೋರ್ಟ್ ಆದೇಶದಂತೆ ರೈತರು ತಮಗಿಷ್ಟ ಬಂದ ಸೈಟ್ ಆಯ್ಕೆಗೆ ಆದೇಶವಿದ್ದರೂ ಸಹ BDA ಮಾತ್ರ ಬಫರ್ ಜೋನ್, ಕೆರೆ ಹಂಚು, ಸೇರಿದಂತೆ ತಮಗಿಷ್ಟ ಬಂದಂತೆ ಸೈಟ್ ನೀಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜೊತೆಗೆ ಇದೀಗ 20*30 ಒಂದು ಕಡೆ ಕೊಟ್ರೆ ಮತ್ತೆಲ್ಲೋ ಮತ್ತೊಂದು ಸೈಟ್ ಹಂಚಿಕೆ ಆಗ್ತಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ರೈತರ ಹೆಸರಲ್ಲಿ ಪ್ರಮಾಣ ಮಾಡೋ ರಾಜಕೀಯದವರು ಸಹ ಅನ್ನದಾತನಿಗೆ ಅನ್ಯಾಯ ಮಾಡುತ್ತಿದ್ದು, ಕೋರ್ಟ್ ಆದೇಶದಂತೆ ಯಾವ ಕ್ರಮಗಳನ್ನು BDA ಪಾಲಿಸುತ್ತಿಲ್ಲ. ಮದ್ಯವರ್ತಿಗಳ ಹಾವಳಿಯಿಂದ ಅಸಲಿ ರೈತರಿಗೆ ಅನ್ಯಾಯ ಆಗ್ತಿದೆ ಎಂದು ದೂರಿದ್ದಾರೆ.
ಇದೇ ರೀತಿ ರೈತರಿಗೆ ಅನ್ಯಾಯ ಮಾಡಲು ಸರಕಾರ ಮುಂದಾದರೆ ಮುಂದಿನ ದಿನಗಳಲ್ಲಿ ರೈತರು ಜಿಬಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.


