ಕಳ್ಳತನ ಮಾಡಿ ಸಮಾಜ ಸೇವೆ ಮಾಡ್ತಿದ್ದ ಈ ಕಳ್ಳ ಯಾರು ಗೊತ್ತಾ?

LATEST NEWSಬೆಂಗಳೂರುಅಪರಾಧ

S3 Media House

8/25/20261 min read

ಸಿನಿಮಾಗಳಲ್ಲಿ ನಾವು ನೀವೆಲ್ಲ ನೋಡಿದ್ದೇವೆ ಹಿರೋ ಹಲವು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿ ಹಲವು ರೀತಿ ಸಮಾಜ ಸೇವೆ ಮಾಡಿ ಸಮಾಜದ ದೃಷ್ಟಿಯಲ್ಲಿ ಹಿರೋ ಆಗ್ತಿದ್ದ. ಆದರೆ ಇಲ್ಲೊಬ್ಬ ಅಸಾಮಿ ಅದೇ ರೀತಿ ಹಿರೋ ಆಗಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಸಮಾಜ ಸೇವೆ ಮಾಡಲು ಕಳ್ಳತನ ಮಾಡಲು ಹೋಗಿ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಹೌದು, ತಮಿಳುನಾಡು ಮೂಲದ ಶಿವರಸನ್(34) ಕಳ್ಳತನ ಮಾಡುತ್ತಿದ್ದ ಆರೋಪಿಯಾಗಿದ್ದಾನೆ. ವೈಟ್ ಫಿಲ್ಡ್ ನಲ್ಲಿ ಮನೆ ಮಾಡಿಕೊಂಡಿದ್ದ ಈ ಆರೋಪಿಯು ಬೇಗೂರಿನಲ್ಲಿ 3, ರಾಮಮೂರ್ತಿ ನಗರದಲ್ಲಿ 2, ಆವಲಹಳ್ಳಿಯಲ್ಲಿ 1, ಹನಗೊಂಡನಹಳ್ಳಿಯಲ್ಲಿ 1, ಕೆ.ಆರ್.ಪುರಂ ನಲ್ಲಿ ಒಂದು ಮನೆಯಲ್ಲಿ ಕಳ್ಳತನ ಮಾಡಿದ್ದಾನೆ. ಈತನ ಮೇಲೆ 30 ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿದ್ದು, ಬಾಗಿಲು ಮುಚ್ಚಿರುವ ಮತ್ತು ಲಾಕ್ ಆಗಿರುವ ಮನೆಗಳೇ ಈತನ ಟಾರ್ಗೆಟ್ ಆಗಿದ್ದವು.

ಇನ್ನು ಆರೋಪಿ ಆರ್ಟಿಸ್ಟ್ ಆಗಿದ್ದು, ಕದ್ದ ಹಣದಲ್ಲಿ ಆಟೋ ಚಾಲಕರಿಗೆ ಬಡವರಿಗೆ ಸಹಾಯ ಮಾಡುತ್ತಿದ್ದನಂತೆ. ಕಳ್ಳತನ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಬೇಗೂರು ಪೊಲೀಸರು ಆರೋಪಿ ಶಿವರಸನ್ ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ ಬಳಿ 196 ಗ್ರಾಂ ಚಿನ್ನ, 4 ಕೆ.ಜಿ. ಬೆಳ್ಳಿ ಸೇರಿದಂತೆ ಒಟ್ಟು 36 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.