ಗಂಡನಿಂದ ಹೆಂಡತಿಯ ಬರ್ಬರ ಕೊಲೆ! ಹೀಗೂ ಕೊಲೆ ಮಾಡಬಹುದಾ?

LATEST NEWSಬೆಂಗಳೂರು ಗ್ರಾಮಾಂತರ

S3 Media House

9/17/20261 min read

ಗಂಡ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಲಾಡ್ಜ್ ನಲ್ಲಿ ಘಟನೆ ನಡೆದಿದ್ದು, ಗೌರಿಬಿದನೂರು ತಾಲ್ಲೂಕ ನಗರಗೆರೆ ನಿವಾಸಿ ವಿದ್ಯಾ ಕೊಲೆಯಾಗಿದ್ದಾಳೆ. ಇನ್ನು ಗೌರಿಬಿದನೂರು ತಾಲ್ಲೂಕು ಮುದುಗೆರೆ ಗ್ರಾಮದ ನಿವಾಸಿ ಆನಂದ್ ಕೊಲೆ ಮಾಡಿ ಪರಾರಿಯಾಗಿರುವ ಪಾಪಿ ಪತಿಯಾಗಿದ್ದಾನೆ.

ಅಂದಹಾಗೆ ಆನಂದ್ ಮತ್ತು ವಿದ್ಯಾ ಇಬ್ಬರು ಕಳೆದ 4 ವರ್ಷಗಳ ಹಿಂದೆ ಪ್ರೀತಿಸಿ ಮದುಯಾಗಿದ್ದು, ದೊಡ್ಡಬಳ್ಳಾಪುರ ನಗರದ ಗಾಂಧಿನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಕಳೆದ 6 ತಿಂಗಳ ಹಿಂದೆ ಕುಟುಂಬದಲ್ಲಿ ಕ್ಷುಲ್ಲಕ ಕಾರಣಕ್ಕೆ ಕಲಹ ಆರಂಭವಾಗಿದೆ. ಇದು ಹೀಗೆ ಮುಂದುವರೆದಿದ್ದು, ಕಳೆದ 2 ತಿಂಗಳ ಹಿಂದೆ ವಿದ್ಯಾ ಆನಂದ್ ನನ್ನು ತೊರೆದು ಬೆಂಗಳೂರಿನ ಪಿಜಿ ಯೊಂದರಲ್ಲಿ ವಾಸ ಮಾಡಲು ಆರಂಭಿಸಿದ್ದಳಂತೆ.

ಈ ಸಂಬಂಧ ಆನಂದ್ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾನೆ. ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರು 20 ದಿನದ ಹಿಂದೆ ವಿದ್ಯಾಳನ್ನು ಕರೆಸಿ ಬುದ್ಧಿ ಮಾತು ಹೇಳಿ ದಂಪತಿಳನ್ನು ಕಳುಹಿಸಿಕೊಟ್ಟಿದ್ದಾರೆ.

ಐಡಿ ಕಾರ್ಡ್ ಟ್ಯಾಗ್ ನಿಂದ ಕೊಲೆ!

ಈಗೆ ಪೊಲೀಸರು ಬುದ್ದಿ ಹೇಳಿ ಕಳುಹಿಸಿದ ನಂತರ ನೆನ್ನೆ ವಿದ್ಯಾಳನ್ನು ದೊಡ್ಡಬಳ್ಳಾಪುರ ನಗರದಲ್ಲಿರುವ ಎಸ್ ಜಿ ಎಸ್ ಲಾಡ್ಜ್ ಗೆ ಕರೆದುಕೊಂಡು ಬಂದಿದ್ಧಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಪಾಪಿ ಪತಿ ಆನಂದ್ ಐಡಿ ಕಾರ್ಡ್ ಟ್ಯಾಗ್ ನಿಂದ ಹೆಂಡತಿಯ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ನಂತರ ತನ್ನ ಹೆಂಡತಿಯ ಮೊಬೈಲ್ ಪೋನ್ ಸಹ ತೆಗೆದುಕೊಂಡು ಹೋಗಿದ್ದಾನೆ. ಇನ್ನು ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.